
ನರಗುಂದ: ‘ರಾಜ್ಯದಲ್ಲಿ ಹಿಂದುಳಿದ ವರ್ಗದವರು ಮುಖ್ಯಮಂತ್ರಿಗಳಾಗಿದ್ದು ಕೇವಲ ಐದೇ ಮಂದಿ. ಅದರಲ್ಲಿ ಸಿದ್ದರಾಮಯ್ಯನವರು ಮಾತ್ರ ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದಾರೆ. ಹಿಂದುಳಿದ ವರ್ಗದವರ ಕಾಲೆಳೆಯಲು ಜನರು ಅವಕಾಶ ಕೊಡಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಶನಿವಾರ ನಡೆದ ಕನಕಭವನದ ಅಡುಗೆ ಮನೆ ನಿರ್ಮಾಣದ ಕಾಮಗಾರಿ ಭೂಮಿಪೂಜೆ ಹಾಗೂ 538ನೇ ಕನಕ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
‘ಈವರೆಗೆ ದಲಿತ, ಅಲ್ಪಸಂಖ್ಯಾತರು ಮುಖ್ಯಮಂತ್ರಿ ಆಗಿಲ್ಲ. ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರು ಅಧಿಕಾರ ದೊರೆತಿದ್ದು, ಎರಡನೇ ಅವಧಿ ಪೂರ್ಣಗೊಳಿಸುವರು. ಆದರೆ, ಹಿಂದುಳಿದವರ ಅಧಿಕಾರ ತಂತಿಮೇಲಿನ ನಡಿಗೆಯಂತೆ. ಯಾವಾಗ ಕೆಡುವುತ್ತಾರೋ ತಿಳಿಯದು’ ಎಂದರು.
‘ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತರ ಅಭಿವೃದ್ಧಿಗೆ ಶ್ರಮಪಟ್ಟಿದ್ದು, ಅಹಿಂದ ಸಮುದಾಯ ಸಂಪೂರ್ಣ ಅವರ ಬೆನ್ನಿಗೆ ನಿಂತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.