ADVERTISEMENT

‘ಬುದ್ದನ ಆದರ್ಶ ಎಲ್ಲರೂ ಪಾಲಿಸಿ’: ವಿರಕ್ತಮಠದ ಶಾಂತಲಿಂಗ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 12 ಮೇ 2025, 13:46 IST
Last Updated 12 ಮೇ 2025, 13:46 IST
ನರಗುಂದ ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಶಾಂತಲಿಂಗ ಶ್ರೀಗಳ ನೇತೃತ್ವದಲ್ಲಿ ಬುದ್ಧ ಪೂರ್ಣಿಮೆ ಆಚರಿಸಲಾಯಿತು
ನರಗುಂದ ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಶಾಂತಲಿಂಗ ಶ್ರೀಗಳ ನೇತೃತ್ವದಲ್ಲಿ ಬುದ್ಧ ಪೂರ್ಣಿಮೆ ಆಚರಿಸಲಾಯಿತು   

ನರಗುಂದ: ‘ಬುದ್ಧ ಪೂರ್ಣಿಮೆ ದಿನದಂದು ಬುದ್ಧನ ಜೀವನ, ಬೋಧನೆಗಳನ್ನು ಅನುಸರಿಸಬೆಕು. ಜೀವನದುದ್ದಕ್ಕೂ ಬುದ್ದನ ಆದರ್ಶಗಳನ್ನು ಪಾಲಿಸಬೇಕು’ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ತಾಲ್ಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತ ಮಠದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ ಬುದ್ಧ ಪೂರ್ಣಿಮೆ ಸಮಾರಂಭದಲ್ಲಿ ಮಾತನಾಡಿದರು.

‘ಬುದ್ದನ ಜೀವನ ಸಿದ್ದಾಂತಗಳು ಸಮಕಾಲೀನ ಸಮಾಜಕ್ಕೆ ಅಗತ್ಯವಿದೆ. ಸಮಾನತೆಯ ಪರಿಕಲ್ಪನೆಯನ್ನು ನೀಡಿದ ಬುದ್ಧನ ತತ್ವ ಸಂದೇಶಗಳು ಸರ್ವಕಾಲಿಕ. ಅವರ ಸಂದೇಶಗಳು ವಿಶ್ವವನ್ನೇ ವ್ಯಾಪಿಸಿವೆ. ಸಾಂಸಾರೀಕ, ಪ್ರಭುತ್ವ ಜೀವನದಿಂದ ಹೊರಬಂದ ಸಿದ್ದಾರ್ಥ ಬುದ್ದನಾದ ಚರಿತ್ರೆ ರೊಮಾಂಚನಕಾರಿ. ಎಲ್ಲರೂ ಬುದ್ಧನನ್ನು ಅರಿಯಬೇಕು’ ಎಂದರು.

ADVERTISEMENT

ಜಿಲ್ಲಾ ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ, ಸಂಪನ್ಮೂಲ ಅಧಿಕಾರಿ ಭೂಸರೆಡ್ಡಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಜಿ. ಮಣ್ಣೂರಮಠ, ಚಂದ್ರು ಮಂಟೂರಮಠ, ವಿರಕ್ತಮಠ, ನಿವೃತ್ತ ಶಿಕ್ಷಕ ಎಸ್.ಬಿ. ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.