ಈ ಭಾಗದ ಹೊಲಗಳಲ್ಲಿ ಗಾಳಿ ವಿದ್ಯುತ್ ಉತ್ಪಾದನೆಗೆ ಕಾಮಗಾರಿ ನಡೆಯುತ್ತಿದೆ. ಹರ್ತಿ ರಸ್ತೆ ಹೊಲದಲ್ಲಿ ಸ್ಟಾಕ್ ಯಾರ್ಡ್ ಮಾಡಿದ್ದು, ಇದಕ್ಕಾಗಿ ಭಾರೀ ಗಾತ್ರದ ಟ್ರಕ್‌ನಲ್ಲಿ 70-80 ಟನ್ ತೂಕದ ಕಬ್ಬಿಣದ ಕಂಬ ಹೊತ್ತು ಸಂಚಾರ ಮಾಡುತ್ತಿವೆ. ಇದರಿಂದ ರಸ್ತೆ ಹಾಳಾಗಿದ್ದು, ರೈತರ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈಗಾಗಲೇ ಕಣವಿ ರಸ್ತೆ ಹಾಳಾಗಿದೆ. ಸಂಬಂಧಪಟ್ಟ ಕಂಪನಿ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು.