ADVERTISEMENT

ವಿಶ್ವ ಅಪ್ಪಂದಿರ ದಿನ: ಆಕಾಶ ಕಳಚಿ ಬಿದ್ದ ಅನುಭವ...

ಕಾಶಿನಾಥ ಬಿಳಿಮಗ್ಗದ
Published 20 ಜೂನ್ 2021, 2:35 IST
Last Updated 20 ಜೂನ್ 2021, 2:35 IST
ಮೊಮ್ಮಗಳ ಹುಟ್ಟು ಹಬ್ಬದಂದು ಪತ್ನಿ ಶಾಂತಾ ಅವರಿಗೆ ಕೇಕ್ ತಿನಿಸುತ್ತಿರುವ ಮುಂಡರಗಿಯ ಲಿಂ.ಚನ್ನಮಲ್ಲಿಕಾರ್ಜುನಸ್ವಾಮಿ ಸರಗಣಾಚಾರಮಠ
ಮೊಮ್ಮಗಳ ಹುಟ್ಟು ಹಬ್ಬದಂದು ಪತ್ನಿ ಶಾಂತಾ ಅವರಿಗೆ ಕೇಕ್ ತಿನಿಸುತ್ತಿರುವ ಮುಂಡರಗಿಯ ಲಿಂ.ಚನ್ನಮಲ್ಲಿಕಾರ್ಜುನಸ್ವಾಮಿ ಸರಗಣಾಚಾರಮಠ   

ಮುಂಡರಗಿ: ‘ಕ್ಷಣಾರ್ಧದಲ್ಲಿಯೇ ಕಾರ್ಗತ್ತಲಿನಲ್ಲಿ ಭೂಮಿ ಬಾಯ್ತೆರೆದು, ಆಕಾಶ ಕಳಚಿಬಿದ್ದ ಅನುಭವ ಆಯಿತು...’

– ತಿಂಗಳ ಹಿಂದೆ ಕೋವಿಡ್‌–19ನಿಂದ ತಮ್ಮ ಪ್ರೀತಿಯ ತಂದೆಯನ್ನು ಕಳೆದುಕೊಂಡಿರುವ ಪಟ್ಟಣದ ಸಂಗಯ್ಯ ಸರಗಣಾಚಾರಮಠ ಮನದಾಳದ ನೋವಿನ ಮಾತುಗಳಿವು.

ಇಲ್ಲಿಯ ಬಿಇಒ ಕಚೇರಿಯಲ್ಲಿ ಎಸ್‌ಡಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚನ್ನಮಲ್ಲಿಕಾರ್ಜುನಸ್ವಾಮಿ ಸರಗಣಾಚಾರಮಠ (59) ಅವರು ಮೇ ಮೊದಲ ವಾರ ಕೋವಿಡ್‌–19 ತಗುಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದರು. 15 ದಿನಗಳ ನಿರಂತರ ಚಿಕಿತ್ಸೆಯ ನಂತರವೂ ಅವರು ಬದುಕಿ ಬಾರದ್ದು ಕುಟುಂಬದ ಸದಸ್ಯರಿಗೆ ಇನ್ನಿಲ್ಲದ ನೋವು ನೀಡಿತು.

ADVERTISEMENT

‘ಅಪ್ಪ ಆಕಾಶದಂತಿದ್ದರು. ಕುಟುಂಬದ ಸಂಪೂರ್ಣ ಜವಾಬ್ದಾರಿ ಅವರ ಹೆಗಲ ಮೇಲಿತ್ತು. ಯಾವ ಸ್ಥಿರಾಸ್ತಿಯ ನೆರವೂ ಇಲ್ಲದೆ ಸರ್ಕಾರಿ ಉದ್ಯೋಗದ ಆಸರೆಯಿಂದ ಅವರು ನಮ್ಮ ಇಡೀ ಕುಟುಂಬವನ್ನು ಸಾಕಿ ಸಲಹುತ್ತಿದ್ದರು. ಈಗ ನಾವೆಲ್ಲ ಅಕ್ಷರಶಃ ಅನಾಥರಾಗಿದ್ದು, ಏನು ಮಾಡಬೇಕೆಂದು ತಿಳಿಯದಾಗಿದೆ’ ಎಂದು ಸಂಗಯ್ಯ ಅವರು ತಮ್ಮ ನೋವನ್ನು ತೋಡಿಕೊಂಡರು.

‘ನಮ್ಮಪ್ಪ ನಮಗೆ ಆಲದ ಮರದಂತಿದ್ದರು. ಅವರ ನೆರಳಿನಲ್ಲಿ ನಾವೆಲ್ಲ ತುಂಬಾ ಸಂತೋಷದಿಂದ ಇದ್ದೆವು. ಅಪ್ಪ ತಮ್ಮ ಇತಿಮಿತಿಯೊಳಗೆ ನಮಗೆ ಯಾವ ಕೊರತೆಯೂ ಉಂಟಾಗದಂತೆ ನಮ್ಮನ್ನು ಸಲುಹಿದರು. ಇಂದು ಅವರಿಲ್ಲದ ಮನೆ ಮನೆ ಯಂತಿಲ್ಲ. ಅಪ್ಪ ಸದಾ ನಮ್ಮಸುತ್ತ ಸುಳಿಯುತ್ತಿರುವ ಅನು ಭವವಾಗುತ್ತಿದೆ’ ಎಂದುಮಗಳು ಮಂಜುಳಾ ಅಪ್ಪನನ್ನುನೆನೆದು ಕಣ್ಣೀರಾದರು.ಜೀವನದಲ್ಲಿ ನಮಗಾರಿಗೂ ಯಾವ ಕಷ್ಟವನ್ನು ಕೊಡಲಿಲ್ಲ. ಸದಾ ನಮ್ಮೆಲ್ಲ ರೊಂದಿಗೆ ನಗು ನಗುತ್ತಾ ಇರುತ್ತಿದ್ದರು. ಜೀವನದಲ್ಲಿ ಯಾವ ಮಕ್ಕಳಿ ಗೂ ಇಂತಹ ಕಷ್ಟ ಬರಬಾರದು. ಇಲ್ಲಿಯವರೆಗೂ ನಮಗೆಲ್ಲ ನಮ್ಮ ಅಪ್ಪನಿದ್ದಾನೆ ಎನ್ನುವ ಧೈರ್ಯವಿತ್ತು. ಆ ಧೈರ್ಯವೇನಮ್ಮನ್ನು ಮುನ್ನಡೆಸುತ್ತಿತ್ತು, ಈಗ...’ ಎಂದು ಮುಂದೆ ಮಾತನಾಡಲಾಗದೆ ಮಗಳು ವಿದ್ಯಾಶ್ರೀ ಮೌನಕ್ಕೆ ಜಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.