
ಶಿರಹಟ್ಟಿ: ‘ಜಾನಪದ ಸಾಹಿತ್ಯದ ಅಭಿರುಚಿ ಮುಂದಿನ ಪೀಳಿಗೆಗೆ ಹಂಚುವ ಕಾರ್ಯ ನಡೆಯಬೇಕು’ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಅಧ್ಯಕ್ಷ ಎಸ್.ಬಾಲಾಜಿ ಹೇಳಿದರು.
ಸ್ಥಳೀಯ ಎಫ್.ಎಂ. ಡಬಾಲಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ‘ಜಾನಪದ ಸಾಹಿತ್ಯದಲ್ಲಿ ವಿಜ್ಞಾನ, ಅಧ್ಯಾತ್ಮ ಹಾಗೂ ನೈತಿಕ ಮೌಲ್ಯ ಪ್ರತಿಪಾದನೆ ಕಾಣಬಹುದಾಗಿದೆ’ ಎಂದರು.
ಗ್ರಾಮೀಣ ಜನರು ಜನಪದ, ಗೀಗಿ ಪದ, ಡೊಳ್ಳಿನ ಪದ, ಭಜನಾ ಪದ, ರಾಶಿ ಪದ, ಸೋಬಾನೆ ಪದಗಳನ್ನು ಹಾಡುತ್ತಿದ್ದರು. ಆಧುನಿಕ ತಂತ್ರಜ್ಞಾನ ಮುಂದುವರಿದಂತೆ ದೇಶಿ ಸೊಗಡು ಮರೆಮಾಚುತ್ತಿದ್ದು, ಉಳಿಸುವ ಉದ್ದೇಶದಿಂದ ಕನ್ನಡ ಜನಪದ ಪರಿಷತ್ ಕಟ್ಟಲಾಗಿದೆ’ ಎಂದರು.
ಪ್ರಾಚಾರ್ಯ ಎಂ.ಸಿ. ಭಜಂತ್ರಿ, ಜಾನಪದ ವಿದ್ವಾಂಸ ರಿಯಾಜ್ ಪಾಷಾ, ಸಂಸ್ಥೆ ಅಧ್ಯಕ್ಷ ಡಿ.ಎನ್. ಡಬಾಲಿ, ಗೌರವ ಕಾರ್ಯದರ್ಶಿ ಎನ್.ಆರ್. ಕುಲಕರ್ಣಿ ಮಾತನಾಡಿದರು. ತಾಲ್ಲೂಕು ಅಧ್ಯಕ್ಷರಾಗಿ ರಾಜು ಪುಟ್ಟಪ್ಪ ನಾಯಕ್ ಹಾಗೂ 12 ಜನ ಸದಸ್ಯರು ಪದಗ್ರಹಣ ಸ್ವೀಕರಿಸಿದರು.
ಮಹಾಂತೇಶ ಬೇರಗಣ್ಣವರ, ಧಾರವಾಡ ಜಾನಪದ ಯುವ ಘಟಕ ಅಧ್ಯಕ್ಷ ಮಹೇಶ್ ತಲ್ವಾರ್, ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ತಾಲ್ಲೂಕು ಕಾರ್ಯದರ್ಶಿ ಸುನಿಲ್ ಲಮಾಣಿ, ಸುಧಾ ಹುಚ್ಚಣ್ಣವರ, ಬಸವರಾಜ್ ಶಿರಂದ, ಉಪನ್ಯಾಸಕ ಎನ್. ಹನುಮರೆಡ್ಡಿ, ವೈ.ಎಸ್. ಪಂಗಣ್ಣವರ, ಪಿ.ಎನ್. ಕುಲಕರ್ಣಿ, ಎಂ.ಎಂ. ನದಾಫ್, ಎಫ್.ಎ. ಬಾಬುಖಾನನವರ, ಪಿ.ವಿ ಹೊಸೂರ ಇದ್ದರು.