ADVERTISEMENT

ಗದಗ | ಶಕ್ತಿ ಕೇಂದ್ರವಾಗಿ ದೇವಸ್ಥಾನ ಬೆಳೆಯಲಿ: ಕೃಷ್ಣಗೌಡ ಎಚ್‌.ಪಾಟೀಲ

ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್‌. ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 6:31 IST
Last Updated 9 ಫೆಬ್ರುವರಿ 2026, 6:31 IST
ಗದಗ ನಗರದ ರೇಣುಕಾದೇವಿ, ಪ್ರತ್ಯಂಗಿರಾದೇವಿ ಟ್ರಸ್ಟ್‌ ವತಿಯಿಂದ ನಿರ್ಮಾಣಗೊಳ್ಳಲಿರುವ ಉಭಯ ದೇವಸ್ಥಾನಗಳ ಭೂಮಿಪೂಜೆ ಕಾರ್ಯಕ್ರಮವನ್ನು ಕೃಷ್ಣಗೌಡ ಎಚ್‌.ಪಾಟೀಲ ನೆರವೇರಿಸಿದರು.
ಗದಗ ನಗರದ ರೇಣುಕಾದೇವಿ, ಪ್ರತ್ಯಂಗಿರಾದೇವಿ ಟ್ರಸ್ಟ್‌ ವತಿಯಿಂದ ನಿರ್ಮಾಣಗೊಳ್ಳಲಿರುವ ಉಭಯ ದೇವಸ್ಥಾನಗಳ ಭೂಮಿಪೂಜೆ ಕಾರ್ಯಕ್ರಮವನ್ನು ಕೃಷ್ಣಗೌಡ ಎಚ್‌.ಪಾಟೀಲ ನೆರವೇರಿಸಿದರು.   

ಗದಗ: ‘ದೇವಸ್ಥಾನಗಳು ಭಕ್ತಿಯ ಜತೆಗೆ ಶಕ್ತಿಯ ಕೇಂದ್ರವಾಗಿ ಬೆಳೆಯಲಿ’ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್‌.ಪಾಟೀಲ ಹೇಳಿದರು.

ನಗರದ ಸಂಭಾಪುರ ರಸ್ತೆಯ ಕೆಇಬಿ ಗ್ರಿಡ್‌ ಹಿಂಬದಿಯ ಬಡಾವಣೆಯಲ್ಲಿ ಭಾನುವಾರ ನಡೆದ ರೇಣುಕಾದೇವಿ, ಪ್ರತ್ಯಂಗಿರಾದೇವಿ ಟ್ರಸ್ಟ್‌ ವತಿಯಿಂದ ನಿರ್ಮಾಣಗೊಳ್ಳಲಿರುವ ಉಭಯ ದೇವಸ್ಥಾನಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರತಿಯೊಬ್ಬರ ಜೀವನದಲ್ಲಿ ದೇವಿ ಶಕ್ತಿಯ ಅನುಭವ ಆಗಿರುತ್ತದೆ. ದೇವಸ್ಥಾನದ ಕೆಲಸದಲ್ಲಿ ರಾಜಕೀಯ ಮಾಡದೇ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ನಿರೀಕ್ಷೆಗೂ ಮೀರಿದ ಕೆಲಸ ಆಗುತ್ತದೆ. ಇದರಿಂದ ಸಮ ಸಮಾಜದ ನಿರ್ಮಾಣ ಸಾಧ್ಯ’ ಎಂದು ಹೇಳಿದರು.

ADVERTISEMENT

ನಗರಸಭೆ ಮಾಜಿ ಅಧ್ಯಕ್ಷ ಪೀರ್‌ಸಾಬ ಕೌತಾಳ ಮಾತನಾಡಿ, ‘ದೇವನೊಬ್ಬ ನಾಮ ಹಲವು. ಎಲ್ಲರೂ ಒಟ್ಟಾಗಿ ಸಹೋರತೆಯಿಂದ ಬಾಳಿ ಬದುಕಿದಾಗ ಮಾತ್ರ ಜನ್ಮ ಸಾರ್ಥಕವಾಗುವುದು. ಜನರ ಎಲ್ಲ ಬೇಡಿಕೆಗಳಿಗೆ ಸದಾ ಸ್ಪಂದಿಸುವೆ’ ಎಂದರು.

ಗದಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಯುವ ಮುಖಂಡ ಅಮರೇಶ ಬೆಟಗೇರಿ, ಹನಮಂತ ವೀರಾಪೂರ, ಟ್ರಸ್ಟ್‌ನ ಗೌರವ ಅಧಕ್ಷೆ ಗದಿಗೆವ್ವ ಗುಡೇನಕಟ್ಟಿ, ಅಧ್ಯಕ್ಷೆ ಅನಿತಾ ಬಾಗಲಕೋಟಿ, ಉಪಾಧ್ಯಕ್ಷೆ ಮಂಜುಳಾ ಕುರಿ, ಕಾರ್ಯದರ್ಶಿ ಗಂಗವ್ವ ಚಕ್ರಣ್ಣವರ, ಸಹಕಾರ್ಯದರ್ಶಿ ರೇಖಾ ಬಾಗಲಕೋಟಿ, ಸಂಘಟನಾ ಕಾರ್ಯದರ್ಶಿ ಈರಮ್ಮ ಬಾಗಲಕೋಟಿ, ಖಜಾಂಚಿ ರೇಖಾ ಜಡಿಯವರ, ಶೈಲಾ ಬೆರಗೇರಿ, ತೇಜಸ್ವಿ ಬಾಗಲಕೋಟಿ ಇದ್ದರು.

ಬಾಹುಬಲಿ ಜೈನರ ನಿರೂಪಣೆ ಮಾಡಿದರು. ಗಂಗಾ ಚಕ್ರಣ್ಣವರ ಸ್ವಾಗತಿಸಿದರು. ರೇಖಾ ಜಡಿಯವರ ವಂದಿಸಿದರು.

‘ಅನುದಾನ ಕೊಡಿಸಲು ಯತ್ನ’

‘ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದೊಂದು ಪವಿತ್ರ ಸ್ಥಳವನ್ನಾಗಿಸಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ’ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.