
ಪ್ರಜಾವಾಣಿ ವಾರ್ತೆ
ಗದಗ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಏಳನೇ ವರ್ಷದ ಸರ್. ಸಿ.ವಿ.ರಾಮನ್ ಆನ್‌ಲೈನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಗಜೇಂದ್ರಗಡ ತಾಲ್ಲೂಕಿನ ನಿಡಗುಂದಿಯ ಎಸ್.ಎ.ಎಸ್. ಪ್ರೌಢಶಾಲೆಯ ವಿದ್ಯಾರ್ಥಿ ಅಣ್ಣಯ್ಯ ಕಂಬಳಿ ಪ್ರಥಮ ಸ್ಥಾನ ಪಡೆದಿದ್ದಾನೆ.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ₹10 ಸಾವಿರ ನಗದು ಬಹುಮಾನ ಪಡೆದು ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಶಾಲೆಯ ವಿಜ್ಞಾನ ಶಿಕ್ಷಕ ಸಂಗಮೇಶ ದಿಂಡೂರು ಇವನಿಗೆ ತರಬೇತಿ ನೀಡಿದ್ದರು.
ಮುಖ್ಯೋಪಾಧ್ಯಾಯ ಈ. ಬಸವರಾಜು, ಪ್ರೊ. ಬಿ.ಕೆ.ಪೂಜಾರ, ಎ.ಕೆ.ಮುಲ್ಲಾನವರ ಮತ್ತು ರವಿ ದೇವರಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.