ಉದ್ಯೋಗ
ಗಜೇಂದ್ರಗಡ: ಉದ್ಯೋಗ ಭರವಸೆ ಕೋಶ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ, ಎಂ.ಎನ್.ಸಿ ಕಂಪನಿಗಳ ಸಹಯೋಗದಲ್ಲಿ ಪಟ್ಟಣದ ಬಿ.ಎಸ್.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಫೆ.28ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಮೇಳದಲ್ಲಿ ಹೋಂಡಾ, ಟಾಟಾ ಎಲೆಕ್ಟ್ರಾನಿಕ್ಸ್, ಇಂಡೋ ಮಿಮ್, ಕರಾವಳಿ ಟೀಚರ್ಸ್ ಹೆಲ್ಪ್ ಲೈನ್, ಫಾಕ್ಸ್ ಕಾನ್, ನವಭಾರತ ಫರ್ಟಿಲೈಸರ್ಸ್, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಎಸ್‌ಬಿಐ ಲೈಫ್ ಇನ್ಷೂರೆನ್ಸ್ ಸೇರಿದಂತೆ ಹಲವು ಸಂಸ್ಥೆಗಳ ವಿವಿಧ ಹಂತದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ₹10 ಸಾವಿರದಿಂದ ₹25 ಸಾವಿರದ ವರೆಗೆ ವೇತನದ ಜೊತೆಗೆ ಆಹಾರ, ಸಾರಿಗೆ, ವಸತಿ ಮತ್ತು ಇತರೆ ಸೌಲಭ್ಯಗಳು ಇರಲಿವೆ. ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಯಾವುದೇ ಪದವೀಧರ ಉದ್ಯೋಗ ಆಕಾಂಕ್ಷಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಅಭ್ಯರ್ಥಿಗಳು ಸ್ವ ವಿವರ, ಅಂಕ ಪಟ್ಟಿಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಸೈಸ್ ಫೋಟೊಗಳನ್ನು ಕಡ್ಡಾಯವಾಗಿ ತರಬೇಕು. ಮಾಹಿತಿಗೆ 93533 38277, 95350 99375 ಸಂಖ್ಯೆ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.