ADVERTISEMENT

ಜಿಡಿಪಿಎಲ್ ಪ್ರೀಮಿಯರ್ ಕ್ರಿಕೆಟ್ ಲೀಗ್: ಹುಲ್ಲೇಶ ಭಜಂತ್ರಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:24 IST
Last Updated 26 ಫೆಬ್ರುವರಿ 2026, 6:24 IST
   

ಗದಗ: ‘ಕನ್ನಡ ಜನಾಭಿವೃದ್ಧಿ ವೇದಿಕೆ ವತಿಯಿಂದ ಇದೇ ಪ್ರಥಮ ಬಾರಿಗೆ ಗದಗ ಜಿಲ್ಲಾ ಪ್ರಿಮೀಯರ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಆಯೋಜಿಸಲಾಗಿದೆ’ ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಹುಲ್ಲೇಶ ಭಜಂತ್ರಿ ತಿಳಿಸಿದರು.

‘ಐಪಿಎಲ್ ಮಾದರಿಯಲ್ಲಿ ಗದಗ ಜಿಲ್ಲಾ ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾವಳಿಗಳನ್ನು ನಡೆಸಲಾಗುವುದು. ಗದಗ ಜಿಲ್ಲೆ ಎಲ್ಲಾ ತಾಲ್ಲೂಕುಗಳನ್ನೊಂಡಂತೆ ಒಟ್ಟು 16 ತಂಡಗಳಿಗೆ ಮಾತ್ರ ಅವಕಾಶವಿದ್ದು, ಗದಗ ಜಿಲ್ಲೆಯ ಎಲ್ಲಾ ಕ್ರಿಕೆಟ್ ಆಟಗಾರರನ್ನು ಹರಾಜಿನ ಮೂಲಕ ಆಯ್ಕೆ ಮಾಡಲಾಗುವುದು’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗದಗ ಜಿಲ್ಲಾ ಆಟಗಾರರಿಗೆ ಮಾತ್ರ ಅವಕಾಶವಿದ್ದು, ಪ್ರತಿ ಪಂದ್ಯಾವಳಿಗಳನ್ನು ಯೂಟ್ಯೂಬ್ ಚಾನಲ್ ಮೂಲಕ ಲೈವ್ ಆಗಿ ವೀಕ್ಷಿಸಬಹುದು. ಈ ಎಲ್ಲಾ ತಂಡದ ಆಟಗಾರರಿಗೆ ವೇದಿಕೆಯ ವತಿಯಿಂದ ಸಮವಸ್ತ್ರಗಳನ್ನು ವಿತರಿಸಲಾಗುವುದು. ತಂಡದ ಮಾಲೀಕತ್ವಕ್ಕಾಗಿ ಕೊನೆಯ ದಿನಾಂಕವನ್ನು ಮಾರ್ಚ್‌ 8ಕ್ಕೆ ನಿಗದಿಪಡಿಸಲಾಗಿದ್ದು, ನೋಂದಣಿ ಅರ್ಜಿಗಳನ್ನು ಕೊಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಅರ್ಜಿಗಳು ಮತ್ತು ಮಾಹಿತಿಗೆ ಅಸ್ಲಂ ಮುಧೋಳ (97395 67030), ವಿಜಯ ಬಿ. (90085 48300), ರಾಮು ಬೆನ್ನಾಳ (80504 46403), ಎಡ್ವರ್ಡ್‌ (95355 23737) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

‘ಪೊಲೀಸ್‌ ತಂಡ, ನಗರಸಭೆ, ಕೆ.ಇ.ಬಿ, ವೈದ್ಯರು ಸೇರಿದಂತೆ ಒಟ್ಟು ಎಂಟು ತಂಡಗಳನ್ನು ಪ್ರತ್ಯೇಕವಾಗಿ ಆಡಿಲಾಗುವುದು. ಈ ಎಂಟು ಟೀಂಗಳಲ್ಲಿ ಗೆದ್ದವರಿಗೆ ಟ್ರೋಫಿ ಮಾತ್ರ ನೀಡಲಾಗುವುದು. ನಗದು ಬಹುಮಾನ ಇರುವುದಿಲ್ಲ. ಈ ಎಲ್ಲ ಟೀಂಗಳಿಗೆ ವೇದಿಕೆಯ ವತಿಯಿಂದ ಸಮವಸ್ತ್ರಗಳನ್ನು ನೀಡಲಾಗುವುದು ಎಂದರು.

ಪಂದ್ಯಾವಳಿಯ ಆಯೋಜಕ ಹುಲ್ಲೇಶ ಭಜಂತ್ರಿ ಮಾತನಾಡಿ, ಜಿಡಿಪಿಎಲ್ ಪ್ರೀಮಿಯರ್ ಕ್ರಿಕೆಟ್ ಲೀಗ್‍ನಲ್ಲಿ ಸ್ಪರ್ಧೆಯಲಿ ವಿಜೇತ ಮೂರು ತಂಡಗಳಿಗೆ ಗದಗ ಜಿಲ್ಲಾ ಪ್ರೀಮಿಯರ್ ಕ್ರಿಕೆಟ್ ಲೀಗ್ ಪ್ರಥಮ ಬಹುಮಾನ ₹1,00,001 ನಗದು, ದ್ವಿತೀಯ ಬಹುಮಾನ ₹50,001, ತೃತೀಯ ಬಹುಮಾನ ₹20,001 ನೀಡಲಾಗುವುದು. ಅಲ್ಲದೇ ವೈಯಕ್ತಿಕ ಬಹುಮಾನಗಳು ಇರಲಿವೆ ಎಂದು ತಿಳಿಸಿದರು.

ಗಣೇಶ, ಅಶೋಕ ಹೊಸಮನಿ, ಅಸ್ಲಂ ಮುಧೋಳ, ವಿಜಯ ಬಿ., ಸಿದ್ದಣ್ಣ ಸಂಗನಾಳ, ಎಡ್ವರ್ಡ್‌ ಧರ್ಮದಾಸ, ರಾಜು ಭಜಂತ್ರಿ, ರಾಮು ಬೆನ್ನಾಳ, ಮಂಜುನಾಥ ಮಲ್ಲಸಮುದ್ರ, ಶ್ರೀಕಾಂತ ಭಜಂತ್ರಿ ಸೇರಿದಂತೆ ಹಲವರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.