ADVERTISEMENT

ಲಕ್ಕುಂಡಿಯಲ್ಲಿ ಮನೆ ಪಾಯ ತೋಡುವಾಗ ಮಹಿಳೆಗೆ ಸಿಕ್ಕ ಭಾರೀ ನಿಧಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 12:19 IST
Last Updated 10 ಜನವರಿ 2026, 12:19 IST
   

ಗದಗ: ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿನ ನಾಲ್ಕನೇ ವಾರ್ಡ್‌ನ ಗಂಗವ್ವ ಬಸವರಾಜ ರಿತ್ತಿ ಎಂಬುವರು ಮನೆ ಕಟ್ಟಿಸಲು ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಶನಿವಾರ ನಿಧಿ ಸಿಕ್ಕಿದೆ.

ತಾಮ್ರದ ಪುಟ್ಟ ಬಿಂದಿಗೆಯಲ್ಲಿ ಅರ್ಧ ಕೆ.ಜಿ.ಗೂ ಹೆಚ್ಚಿನ ತೂಕದ ಚಿನ್ನಾಭರಣಗಳು ಸಿಕ್ಕಿರುವುದಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.

ಅಡಿಪಾಯ ತೆಗೆಯುವಾಗ ಐದಾರು ಅಡಿಯಷ್ಟು ಆಳದಲ್ಲಿ ಕೊರಳಿಗೆ ಧರಿಸುವ ಸರ, ಉಂಗುರ, ಕಡಗ ಸೇರಿದಂತೆ ಪ್ರಾಚೀನ ಕಾಲದ ವಿನ್ಯಾಸ ಹೊಂದಿರುವ ಚಿನ್ನಾಭರಣವಿದ್ದ ಬಿಂದಿಗೆ ಸಿಕ್ಕಿದೆ. ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ತಜ್ಞರು ಅಧ್ಯಯನ ನಡೆಸಿದ ನಂತರ ಚಿನ್ನಾಭರಣಗಳು ಯಾರ ಕಾಲದ್ದು ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.