ADVERTISEMENT

ಗದಗ: ಎಚ್.ಐ.ವಿ ಜಾಗೃತಿಗಾಗಿ ಬೈಕ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 6:27 IST
Last Updated 21 ಸೆಪ್ಟೆಂಬರ್ 2025, 6:27 IST
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಎಚ್‌ಐವಿ ಏಡ್ಸ್ ಪ್ರಚಾರಾಂದೋಲನ ಬೈಕ್ ರ‍್ಯಾಲಿಗೆ ಡಿಟಿಒ ಡ್ಯಾಪ್ಕೋ ಅಧಿಕಾರಿ ಅರುಂಧತಿ.ಕೆ ಚಾಲನೆ ನೀಡಿದರು
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಎಚ್‌ಐವಿ ಏಡ್ಸ್ ಪ್ರಚಾರಾಂದೋಲನ ಬೈಕ್ ರ‍್ಯಾಲಿಗೆ ಡಿಟಿಒ ಡ್ಯಾಪ್ಕೋ ಅಧಿಕಾರಿ ಅರುಂಧತಿ.ಕೆ ಚಾಲನೆ ನೀಡಿದರು   

ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಎಚ್‌ಐವಿ ಏಡ್ಸ್ ಪ್ರಚಾರಾಂದೋಲನ ಬೈಕ್ ರ‍್ಯಾಲಿಗೆ ಡಿಟಿಒ ಡ್ಯಾಪ್ಕೋ ಅಧಿಕಾರಿ ಅರುಂಧತಿ.ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.

ಬೈಕ್ ರ‍್ಯಾಲಿ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಟಿಪ್ಪು ಸರ್ಕಲ್, ಮುಳಗುಂದ ನಾಕಾ, ಜುಮ್ಮಾ ಮಸೀದಿ, ಟಾಂಗಾ ಕೂಟ, ಮಹೇಂದ್ರ ಕರ ಸರ್ಕಲ್, ಗಾಂಧಿ ಸರ್ಕಲ್, ಪೋಸ್ಟ್ ಆಫೀಸ್ ಮುಂದೆ ಸಾಗಿ ನಗರದ ಕೆ.ಸಿ.ರಾಣಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬಂದು ಮುಕ್ತಾಯಗೊಂಡಿತು.

ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ, ಜಿಲ್ಲಾ ಮೇಲ್ವಿಚಾರಕ ಬಸವರಾಜ ಲಾಳಗಟ್ಟಿ, ಆರೋಗ್ಯ ಇಲಾಖೆಯ ಎನ್.ಟಿ.ಇ.ಪಿ, ಡ್ಯಾಪ್ಕೋ, ಐಸಿಟಿಸಿ, ಎಆರ್‌ಟಿ ಸಿಬ್ಬಂದಿ, ರಕ್ಷಣೆ ಸೃಷ್ಟಿ ಸಂಕುಲ, ನವಚೇತನ ಮತ್ತು ಚೈತನ್ಯ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.