ADVERTISEMENT

ಪಂಚ ಗ್ಯಾರಂಟಿಗಳಿಂದ ಮಠದ ಖರ್ಚು ಹೆಚ್ಚಳ: ದಿಂಗಾಲೇಶ್ವರ ಶ್ರೀ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:42 IST
Last Updated 13 ಜೂನ್ 2025, 16:42 IST
<div class="paragraphs"><p>ದಿಂಗಾಲೇಶ್ವರ ಶ್ರೀ</p></div>

ದಿಂಗಾಲೇಶ್ವರ ಶ್ರೀ

   

ಗದಗ: ‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಮಠಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಉಚಿತ ಯೋಜನೆಗಳು ಆಶ್ರಮದ ಖರ್ಚು ಹೆಚ್ಚಲಿಕ್ಕೆ ಕಾರಣ ಆಗಿವೆ’ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಶುಕ್ರವಾರ ರಾತ್ರಿ ನಡೆದ ಕೀರ್ತನ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ADVERTISEMENT

‘ಉಚಿತ ಯೋಜನೆಗಳಿಂದಾಗಿ ಮಠಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರಸಾದ ವ್ಯವಸ್ಥೆ ನೂರು ಪಟ್ಟು ಹೆಚ್ಚಾಗಿದೆ. ಸರ್ಕಾರ ಮಾಡುವ ಕೆಲಸವನ್ನೇ ಮಠಗಳು ಮಾಡುತ್ತಿವೆ. ಹಾಗಾಗಿ, ಮಠಗಳ ಸಮಗ್ರ ಬೆಳವಣಿಗೆಗೆ ಅನ್ನ, ಹಣ ನೀಡುವುದು ಸರ್ಕಾರದ ಕೆಲಸ’ ಎಂದರು.

‘ಆದರ್ಶ ಸರ್ಕಾರ ತನ್ನ ಕಿಮ್ಮತ್ತು ಉಳಿಸಿಕೊಳ್ಳಲು ವೀರೇಶ್ವರ ಪುಣ್ಯಾಶ್ರಮದಂತಹ ಸಂಸ್ಥೆಗೆ ಪ್ರತಿ ವರ್ಷ ಕೇಳದೆಯೇ ಅನುದಾನ ನೀಡಬೇಕು. ಈ ನಿಟ್ಟಿನಲ್ಲಿ ಆಡಳಿತಾರೂಢ ಸರ್ಕಾರಗಳು ಗಮನ ಹರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.