
ಗದಗ: ‘ಭಾರತೀಯ ಸಂವಿಧಾನವು ನಮ್ಮ ರಾಷ್ಟ್ರೀಯ ಕಾನೂನು ಮತ್ತು ಆಡಳಿತ ವ್ಯವಸ್ಥೆಯ ಬುನಾದಿಯಾಗಿದೆ. ಸಂವಿಧಾನದ ಸಂಪೂರ್ಣ ಆತ್ಮ ಮತ್ತು ಆಶಯ ಪ್ರಸ್ತಾವನೆಯಲ್ಲೇ ಅಡಗಿದೆ’ ಎಂದು ಪ್ರಭಾರ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಹೇಳಿದರು.
ನಗರದ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಬ್ರಿಟಿಷರ ಕಾಲದಲ್ಲಿ ಲಾರ್ಡ್ ಬರ್ಕನ್‌ಹೆಡ್, ವಿನ್‌ಸ್ಟನ್ ಚರ್ಚಿಲ್ ಮೊದಲಾದವರು ಭಾರತಕ್ಕೆ ಸಂವಿಧಾನ ರಚಿಸುವ ಸಾಮರ್ಥ್ಯವಿಲ್ಲ ಎಂದು ಅಣಕಿಸಿದರು. ಆದರೆ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜ್ಞಾನ, ದೂರದೃಷ್ಟಿತ್ವ ಮತ್ತು ಭಾರತೀಯ ಸಂಸ್ಕೃತಿಯ ಆಳವಾದ ಅರಿವಿನ ಆಧಾರದಲ್ಲಿ ವಿಶ್ವದ ಅತ್ಯುತ್ತಮ ಸಂವಿಧಾನ ರೂಪಿಸಲಾಯಿತು’ ಎಂದು ಹೇಳಿದರು.
ಐಕ್ಯುಎಸಿ ಸಂಯೋಜಕ ಪ್ರೊ. ಸಂತೋಷ ಕುಮಾರ ಪಿ.ಕೆ. ಸಂವಿಧಾನದ ಮಹತ್ವ ವಿವರಿಸಿದರು.
ಈ ವೇಳೆ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನ ಕುರಿತ ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆ
ಏರ್ಪಡಿಸಲಾಗಿತ್ತು. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರಕಾಶ್ ಮಾಚೇನಹಳ್ಳಿ ಸ್ವಾಗತಿಸಿದರು. ಅಭಿಷೇಕ್ ಎಚ್.ಇ. ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿದರು.
ವಿಶೇಷಾಧಿಕಾರಿ ಎಂ.ಬಿ. ಚನ್ನಪ್ಪಗೌಡರ, ಆಡಳಿತಾಧಿಕಾರಿ ಶಶಿಭೂಷಣ ದೇವೂರ, ಸಿಬ್ಬಂದಿಯಾದ ಅಬ್ದುಲ್ ಅಝೀಜ್ ಮುಲ್ಲಾ, ಗಿರೀಶ್ ದೀಕ್ಷಿತ್, ವಿಶ್ವವಿದ್ಯಾಲಯದ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪಿಯು ಕಾಲೇಜುಗಳ ಉಪನ್ಯಾಸಕರು ಇದ್ದರು.
ಯುವಜನರು ನ್ಯಾಯ ಸ್ವಾತಂತ್ರ್ಯ ಸಮಾನತೆ ಮತ್ತು ಬಾಂಧವ್ಯ ಈ ನಾಲ್ಕು ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶ ಬಲಿಷ್ಠವಾಗಿ ಬೆಳೆಯುತ್ತದೆಪ್ರೊ. ಸುರೇಶ ವಿ.ನಾಡಗೌಡರ ಪ್ರಭಾರ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.