
ಮುಳಗುಂದ: ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಕನ್ನಡ ಭಾಷೆ ಎಲ್ಲರ ಮನ ಹಾಗೂ ಮನೆಯ ಭಾಷೆಯಾಗಿರಬೇಕು’ ಎಂದು ಸಾಹಿತಿ ಅನ್ನದಾನ ಹಿರೇಮಠ ಹೇಳಿದರು.
ಇಲ್ಲಿನ ಆರ್.ಎನ್. ದೇಶಪಾಂಡೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಪರಿಷತ್ ವತಿಯಿಂದ ಮಂಗಳವಾರ ನಡೆದ ತಿಂಗಳ ನಾಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಚಾರ್ಯ ಆರ್.ಎಂ. ಕಲ್ಲನಗೌಡ್ರ ಮಾತನಾಡಿ, ‘ಕನ್ನಡ ಭಾಷೆಗೆ ಇರುವ ಶಕ್ತಿ ಇನ್ನಾವುದೆ ಭಾಷೆಯಲ್ಲಿ ಕಾಣಸಿಗದು. ನಾಡು-ನುಡಿ ಜಾಗೃತಿ ಎಲ್ಲರಲ್ಲೂ ಬೆಳೆಯಬೇಕು. ಕರ್ನಾಟಕದ ಏಕೀಕರಣಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ಕೊಡುಗೆ ಅಪಾರ’ ಎಂದರು.
ಪ್ರೊ.ವಿಶ್ವನಾಥ ಟಿ. ಮಾತನಾಡಿದರು. ಈ ವೇಳೆ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸದಸ್ಯರಾದ ವೀರಣ್ಣ ವಡ್ಡೀನ, ನಾಗರಾಜ, ಸುರೇಶ ಗೌಡ ಇದ್ದರು. ಎನ್.ಕೆ. ಕಡೆಮನಿ ನಿರೂಪಿಸಿದರು. ಶಂಕರಣ್ಣ ಸಂಕಣ್ಣವರ ತಂಡದಿಂದ ಗೀತ ಗಾಯನ ಕಾರ್ಯಕ್ರಮ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.