
ನರಗುಂದ: ‘ಕವಿತೆ, ಲೇಖನ ಬರೆಯಲು ಓದು ಪ್ರಮುಖವಾಗಿದ್ದು, ಪ್ರತಿಯೊಬ್ಬರು ಕನ್ನಡ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಲೇಖಕಿ ಲಲಿತಾ ಕೆರಿಮನಿ ಹೇಳಿದರು.
ಪಟ್ಟಣದ ಸರಸ್ವತಿ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಬಳಗ ಹಾಗೂ ಸರಸ್ವತಿ ದೇವಸ್ಥಾನ ಸೇವಾ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕವಿಗೋಷ್ಠಿ ಹಾಗೂ ಕನ್ನಡಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗದೇ ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ಅಗತ್ಯವಿದೆ’ ಎಂದರು.
ಕರ್ನಾಟಕ ರಾಜ್ಯ ಬರಹಗಾರರ ಬಳಗ ಜಿಲ್ಲಾ ಘಟಕದ ಅಧ್ಯಕ್ಷೆ ಕಲಾಶ್ರೀ ಹಾದಿಮನಿ ಮಾತನಾಡಿ, ‘ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಂಟು ಕನ್ನಡ ಉಪನ್ಯಾಸಕರಿಗೆ ಕನ್ನಡ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ’ ಎಂದರು.
ಸಾಹಿತಿ ರತ್ನಾ ಬದಿ, ಬಸವಕೇಂದ್ರದ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಸರಸ್ವತಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಚನ್ಯಯ್ಯ ಸಂಗಳಮಠ, ರಾಮ ಶೆಟ್ಟರ ಮಾತನಾಡಿದರು.
ಕನ್ನಡ ಉಪನ್ಯಾಸಕರಾದ ಸಂಗಮೇಶ ಹಾದಿಮನಿ, ನೀಲಮ್ಮ ಅಂಗಡಿ, ಗಿರೀಶ ರಡೇರ, ಎಚ್. ಕೆ. ಹಲವಾಗಲಿ, ಲಲಿತಕ್ಕ ಕೆರಿಮನಿ, ಬಸವರಾಜ ಹಲಕುರ್ಕಿ ಅವರಿಗೆ ಕನ್ನಡ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಜಿಲ್ಲಾ ಮಟ್ಟದ ಕವಿಗೋಷ್ಠಿ ನಡೆಸಲಾಯಿತು. ಸಾಹಿತಿ ಸವಿತಾ ಕಲಹಾಳ ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಮಂಜುನಾಥ ಫಾಳಿ, ದೀನು ಆದಿ, ಚೈತ್ರಾ ಒದೇಕಾರ, ಶ್ರೀಧರ ಹಂದಿಗೋಳ, ನಿರಂಜನ ಮಡಿವಾಳರ, ಬಸವರಾಜ ಕ್ಯಾರಕೊಪ್ಪ, ರಾಮ ಶೆಟ್ಟರ, ಶಿವಾನಂದ ಹುನಗುಂಡಿ, ನೀಲಮ್ಮ ಅಂಗಡಿ, ಎಚ್.ಕೆ. ಹಲವಾಗಲಿ ಇದ್ದರು.
ಜಿಲ್ಲೆಯ ಎಂಟು ಉಪನ್ಯಾಸಕರಿಗೆ ಕನ್ನಡ ಶ್ರೀ ಪ್ರಶಸ್ತಿ ಪ್ರದಾನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕವಿಗೋಷ್ಠಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.