ಗದಗ: ‘ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸತ್ಯ ಹೇಳುವುದೇ ಕಡಿಮೆ’ ಎಂದು ಸಚಿವ ಎಚ್.ಕೆ.ಪಾಟೀಲ ಲೇವಡಿ ಮಾಡಿದರು.
ಉಡುಪಿ ವಿಡಿಯೊ ವಿಷಯಕ್ಕೆ ಸಂಬಂಧಿಸಿದಂತೆ, ‘ವರ್ಷದಿಂದ ವಿಡಿಯೊ ರೆಕಾರ್ಡ್ ನಡೀತಿದೆ’ ಎಂಬ ಅವರ ಹೇಳಿಕೆಗೆ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿದರು.
‘ವರ್ಷದಿಂದ ನೀವೇ ಅಧಿಕಾರದಲ್ಲಿದ್ದಿರಿ. ನಿಮ್ಮ ಕೈಯಲ್ಲೇ ಆಡಳಿತ ಇತ್ತು. ಇಂಟಲಿಜೆನ್ಸ್ ಇತ್ತು. ಪೊಲೀಸರೂ ಇದ್ದರು. ಇಂತಹ ಪ್ರಶ್ನೆಗಳನ್ನು ನಮಗೆ ಕೇಳುವುದಕ್ಕೆ ಬರುವುದಿಲ್ಲವೇ? ಆದರೆ, ಅದು ಜವಾಬ್ದಾರಿಯುತ ನಾಗರಿಕನ ಪ್ರಶ್ನೆ ಅಲ್ಲ. ಇದು ವಿದ್ಯಾರ್ಥಿಗಳ ಖಾಸಗಿತನದ ಹಕ್ಕಿನ ಪ್ರಶ್ನೆ. ಈ ವಿಚಾರದಲ್ಲಿ ಯುವಜನರ ಇಂತಹ ಕೆಟ್ಟ ನಗೆಯಾಟವನ್ನು ಸಮಾಜ ಒಪ್ಪುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.