ADVERTISEMENT

ಕನ್ನಡ ಸಾಹಿತ್ಯದ ಜನಪ್ರಿಯ ಕವಿ ಕುಮಾರವ್ಯಾಸ: ಆನಂದ್ ಪೋತ್ನಿಸ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 4:54 IST
Last Updated 3 ಜನವರಿ 2026, 4:54 IST
ಗದಗ ನಗರದ ಆದರ್ಶ ಶಿಕ್ಷಣ ಸಮಿತಿಯ ಎಎಸ್‌ಎಸ್‌ ಕಾಲೇಜಿನಲ್ಲಿ ಶುಕ್ರವಾರ ಕುಮಾರವ್ಯಾಸ ಜಯಂತಿ ಆಚರಿಸಲಾಯಿತು
ಗದಗ ನಗರದ ಆದರ್ಶ ಶಿಕ್ಷಣ ಸಮಿತಿಯ ಎಎಸ್‌ಎಸ್‌ ಕಾಲೇಜಿನಲ್ಲಿ ಶುಕ್ರವಾರ ಕುಮಾರವ್ಯಾಸ ಜಯಂತಿ ಆಚರಿಸಲಾಯಿತು   

ಗದಗ: ‘ಶ್ರೇಷ್ಠ ಕವಿ ಕುಮಾರವ್ಯಾಸ ಜಯಂತಿಯನ್ನು ನಾಡಿನೆಲ್ಲೆಡೆ ಆಚರಿಸಲಾಗುತ್ತಿದ್ದು, ಮಹಾನ್ ಕವಿಯನ್ನು ನೆನೆಯುವ ಸಂದರ್ಭ ನಮಗೆ ಪ್ರಾಪ್ತವಾಗಿದೆ. ಜತೆಗೆ ಅಂತಹ ಒಬ್ಬ ಶ್ರೇಷ್ಠ ಕವಿ ನಮ್ಮ ಜಿಲ್ಲೆಯವರು ಎಂಬುದೇ ಹೆಮ್ಮೆಯ ಸಂಗತಿಯಾಗಿದೆ’ ಎಂದು ಎಎಸ್‌ಎಸ್‌ ಕಾಲೇಜಿನ ಚೇರ್ಮನ್‌ ಆನಂದ್‌ ಪೋತ್ನಿಸ್‌ ಹೇಳಿದರು.

ನಗರದ ಆದರ್ಶ ಶಿಕ್ಷಣ ಸಮಿತಿ ಆವರಣದಲ್ಲಿ ಶುಕ್ರವಾರ ನಡೆದ ಕುಮಾರವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕುಮಾರವ್ಯಾಸ 15ನೇ ಶತಮಾನದ ಉತ್ತರಾರ್ಧದಲ್ಲಿದ್ದು, ಜನಪ್ರಿಯ ಗದುಗಿನ ಭಾರತವನ್ನು ಬರೆದ ಕವಿ. ಇವರು ಕನ್ನಡ ಸಾಹಿತ್ಯದ ಉನ್ನತೋನ್ನತ ಕವಿಯಾಗಿ ಮೆರೆದವರು’ ಎಂದರು.

ADVERTISEMENT

ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಟಿ.ನಾಯ್ಕರ್, ಬಿಬಿಎ ಹಾಗೂ ಬಿಸಿಎ ಮಹಾವಿದ್ಯಾಲಯದ ಪ್ರಾಚಾರ್ಯ ಲಿಂಗರಾಜ್ ರಶ್ಮಿ, ಸಂಸ್ಥೆಯ ಅಧೀಕ್ಷಕ ಪ್ರಾಣೇಶ್ ಬೆಳ್ಳಟ್,ಟಿ ಮಹಾವಿದ್ಯಾಲಯದ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.