ADVERTISEMENT

ಲಕ್ಕುಂಡಿ: ಪ್ರಾಚ್ಯ ಅವಶೇಷ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 19:48 IST
Last Updated 24 ಫೆಬ್ರುವರಿ 2026, 19:48 IST
<div class="paragraphs"><p>ಗದಗ ತಾಲ್ಲೂಕಿನ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನದಲ್ಲಿ&nbsp; ಸರ್ಪದ ಚಿತ್ರವಿರುವ ಪ್ರಾಚ್ಯ ಅವಶೇಷ ಸಿಕ್ಕಿದೆ</p></div>

ಗದಗ ತಾಲ್ಲೂಕಿನ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನದಲ್ಲಿ  ಸರ್ಪದ ಚಿತ್ರವಿರುವ ಪ್ರಾಚ್ಯ ಅವಶೇಷ ಸಿಕ್ಕಿದೆ

   

ಗದಗ: ತಾಲ್ಲೂಕಿನ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ಆವರಣದಲ್ಲಿ ಉತ್ಖನನದ ವೇಳೆ ಸಿಕ್ಕ ಪ್ರಾಚ್ಯ ಅವಶೇಷಗಳ ಅಧ್ಯಯನಕ್ಕೆ ಸರ್ಕಾರ ಪುರಾತತ್ವ ಶಾಸ್ತ್ರಜ್ಞ ಎಂ.ಎಸ್‌.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿದೆ.

ಇತಿಹಾಸ ತಜ್ಞರಾದ ಡಾ. ರಾಘವೇಂದ್ರ ರಾವ್‌ ಎಚ್‌.ಕುಲಕರ್ಣಿ, ಪ್ರೊ. ಚೂಡಾಮಣಿ ನಂದಗೋಪಾಲ, ಹನುಮಾಕ್ಷಿ ಗೋಗಿ, ರತ್ನಶಾಸ್ತ್ರಜ್ಞ ಪ್ರಭು ಕಮ್ಮಾರ ಅವರು ಸಮಿತಿ ಸದಸ್ಯರಾಗಿದ್ದಾರೆ. ಪುರಾತತ್ವ ಶಾಸ್ತ್ರಜ್ಞ ಡಾ. ಆರ್‌.ಶೇಜೇಶ್ವರ ಸಮಿತಿಯ ಕಾರ್ಯದರ್ಶಿಯನ್ನಾಗಿ ಸರ್ಕಾರ ನೇಮಕ ಮಾಡಿದೆ.

ADVERTISEMENT

ಸಮಿತಿಯು ನಿಧಿಯ ನಿಖರವಾದ ಕಾಲಗಣನೆ, ಬಳಕೆ, ಮೌಲ್ಯಮಾಪನ ಮತ್ತು ಇನ್ನಿತರೆ ಅಂಶಗಳ ಕುರಿತು ತಜ್ಞರು ಅಧ್ಯಯನ ನಡೆಸಲಿದ್ದು, 15 ದಿನಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.