ADVERTISEMENT

ಲಕ್ಕುಂಡಿ | ಉತ್ಖನನ ಸ್ಥಳ ಗುರುತು: ಸ್ಥಳೀಯರ ಅಪಸ್ವರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 0:06 IST
Last Updated 29 ಜನವರಿ 2026, 0:06 IST
ಮಡಿಕೆ ಚೂರುಗಳು
ಮಡಿಕೆ ಚೂರುಗಳು   

ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದಿರುವ ಉತ್ಖನನದಲ್ಲಿ ಬುಧವಾರ ಮಡಿಕೆ ಚೂರುಗಳಷ್ಟೇ ಪತ್ತೆಯಾಗಿವೆ.

ಉತ್ಖನನ 11 ದಿನಗಳನ್ನು ಪೂರ್ಣಗೊಳಿಸಿದ್ದು, ಈವರೆಗೆ 10 ಅಡಿ ಆಳದವರೆಗೆ ನಡೆದಿದೆ. ಈವರೆಗೆ ಮಹತ್ವದ ಪ್ರಾಚ್ಯ ಅವಶೇಷಗಳು ಸಿಗದ ಕಾರಣ ಬುಧವಾರ ಸ್ಥಳೀಯರು ಅಪಸ್ವರ ಎತ್ತಿದ್ದಾರೆ.

‘ನೀರಿನ ಪೈಪ್‌ಗಳನ್ನು ಅಳವಡಿಸಲು ದೇವಸ್ಥಾನದ ಆವರಣದಲ್ಲಿ ಹಿಂದೆ 15 ಅಡಿ ಆಳ ಅಗೆದು ಮಣ್ಣು, ಕಲ್ಲು ತುಂಬಿದ್ದೇವೆ. ಇಲ್ಲಿ ಉತ್ಖನನಕ್ಕೆ ಸ್ಥಳ ಗುರುತು ಮಾಡಿದ್ದು ಏಕೆ’ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ADVERTISEMENT

‘ದೇವಸ್ಥಾನ ಸುತ್ತ ಕೋಟೆ ಗೋಡೆ ಇತ್ತು. ಮಳೆ ನೀರು ಸಿದ್ಧರ ಬಾವಿಗೆ ಹೋಗಲಿ ಎಂದು ಪೈಪ್‌ಲೈನ್‌ ಮಾಡಿದ್ದೇವೆ. ಆಗ ಮುಚ್ಚಲು ಬಳಸಿದ್ದ ಕಲ್ಲುಗಳೇ ಈಗ ಸಿಗುತ್ತಿವೆ’ ಎಂದು ಸ್ಥಳೀಯರಾದ ರಮೇಶ್‌ ಹಳ್ಳಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.