ADVERTISEMENT

ಅಧ್ಯಾತ್ಮ ಗುರಿ ಸಾಧನೆ ಕಷ್ಟಸಾಧ್ಯ: ಚನ್ನವೀರ ಸ್ವಾಮೀಜಿ

ಲಕ್ಷ ದೀಪೋತ್ಸವ: ಚನ್ನವೀರ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 3:10 IST
Last Updated 5 ಜನವರಿ 2026, 3:10 IST
ಮುಂಡರಗಿ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಸಮಾರಂಭವನ್ನು ಅನ್ನದಾನೀಶ್ವರ ಸ್ವಾಮೀಜಿ ಉದ್ಘಾಟಿಸಿದರು
ಮುಂಡರಗಿ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಸಮಾರಂಭವನ್ನು ಅನ್ನದಾನೀಶ್ವರ ಸ್ವಾಮೀಜಿ ಉದ್ಘಾಟಿಸಿದರು   

ಮುಂಡರಗಿ: ‘ಮನುಷ್ಯ ತನ್ನಲ್ಲಿರುವ ಕಾಮ, ಕ್ರೋಧ, ಮೋಹ, ಮಧ, ಮತ್ಸರ ತೊರೆದಾಗ ಮಾತ್ರ ಆಧ್ಯಾತ್ಮದ ಗುರಿ ತಲುಪಲು ಸಾಧ್ಯ’ ಎಂದು ಲಿಂಗನಾಯಕನ ಗ್ರಾಮದ ಚನ್ನವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದ ಅವರು, ‘ಮನುಷ್ಯ ತನ್ನ ಜೀವನದಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ‘ಮನುಷ್ಯ ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗಬೇಕು. ಜೀವನದಲ್ಲಿ ಧರ್ಮ ಪಾಲನೆ ಮಾಡುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು’ ಎಂದರು.

ADVERTISEMENT

ಅಯ್ಯಪ್ಪ ಮಾಲಾಧಾರಿ ಫಕ್ಕಿರೇಶ ಗುರುಸ್ವಾಮಿ, ಕಾಶೀನಾಥ ಅಳವಂಡಿ, ಪತ್ರಕರ್ತ ಸಂತೋಷ ಮುರಡಿ, ಮಹಾಲಿಂಗಯ್ಯ ಹಿರೇಮಠ, ವಿಠ್ಠಲ ಗಣಾಚಾರಿ ಅವರನ್ನು ಸನ್ಮಾನಿಸಲಾಯಿತು. ಕಲಾಮೃತ ಹಾಗೂ ಲಲಿತ ಕಲಾ ಸಂಸ್ಥೆ ವಿದ್ಯಾರ್ಥಿಗಳು ಅಯ್ಯಪ್ಪಸ್ವಾಮಿ ನೃತ್ಯ ರೂಪಕ ಪ್ರದರ್ಶಿಸಿದರು.

ಮುಖ್ಯ ಶಿಕ್ಷಕ ಎಂ.ವಿ. ನಾಗರಳ್ಳಿ ಸ್ವಾಗತಿಸಿ, ನಿರೂಪಿಸಿದರು. ದೇವಸ್ಥಾನದ ಧರ್ಮದರ್ಶಿ ಮಂಜುನಾಥ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಚನ್ನಬಸವ ದೇವರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ, ಸಚೀನಸ್ವಾಮಿ ಮೇಟಿ, ಬಸನಗೌಡ ಗುಡಗೇರಿ, ವೀರೇಶ ಬಡಿಗೇರ, ಶಿವಾನಂದ ಪುರದ, ಪ್ರಶಾಂತ ಅಳವಂಡಿ, ಸತೀಶ ಕಂಚಗಾರ, ಮಹೇಶ ಬಡಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.