
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ವ್ಯಾಪ್ತಿಯ ಈಶ್ವರ ನಗರದ 3ನೇ ಕ್ರಾಸ್‍ನಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಬಿಟ್ಟಿರುವ ಜಾಗದಲ್ಲಿ ಪುರಸಭೆ ಮೇಲ್ಮಟ್ಟದ ಜಲಾಗಾರ ನಿರ್ಮಿಸುತ್ತಿದೆ. ಆದರೆ, ಆ ಜಾಗದಲ್ಲಿ ಉದ್ಯಾನವನ ನಿರ್ಮಿಸಿ ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ನಿವಾಸಿಗಳು ಸೋಮವಾರ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಅವರಿಗೆ ಮನವಿ ಸಲ್ಲಿಸಿದರು.
ಸದ್ಯ ಪುರಸಭೆಯವರು ಉದ್ಯಾನ ನಿರ್ಮಾಣಕ್ಕಾಗಿ ಮೀಸಲಿರಿಸಿದ್ದ ಜಾಗದಲ್ಲಿ ಅಮೃತ 2.0 ಯೋಜನೆಯಡಿ ಮೇಲ್ಮಟ್ಟದ ಜಲಗಾರ ನಿರ್ಮಿಸಲು ಮುಂದಾಗಿದೆ. ಪುರಸಭೆ ಈ ಕಾಮಗಾರಿ ಕೈ ಬಿಡದಿದ್ದರೆ ಈಶ್ವರ ನಗರ, ಲಕ್ಷ್ಮೀನಗರ ನಿವಾಸಿಗಳು ಪುರಸಭೆ ಎದುರು ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭೆ ಮಾಜಿ ಸದಸ್ಯ ಪ್ರವೀಣ ಬಾಳಿಕಾಯಿ, ಆರ್.ಎನ್. ಪಂಚಭಾವಿ, ಸಂತೋಷ ಪಾಟೀಲ, ಪರಮೇಶ ಕಾಳಶೆಟ್ಟಿ, ಎಸ್.ಎಲ್. ಕೊಪ್ಪದ, ಚೇತನ ನೀಲಪ್ಪಗೌಡ್ರು, ಸಜೀವಕುಮಾರ ಬೀದರದಾರ, ಸರಸ್ವತಿ ಹೊನ್ನೇಗೌಡ್ರ, ಶೋಭಾ ಅಂಗಡಿ, ಕವಿತಾ ಪವಾಡಶೆಟ್ಟರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.