ADVERTISEMENT

ದಿ ಲಾಸ್ಟ್ ಅವತಾರ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 8:48 IST
Last Updated 31 ಡಿಸೆಂಬರ್ 2018, 8:48 IST
ಲೇಖಕ ವಿಶ್ವಾಸ ಮುದಗಲ್ (ಬಲ) ಅವರು ಗದುಗಿನಲ್ಲಿ ತಮ್ಮ ‘ದಿ ಲಾಸ್ಟ್ ಅವತಾರ್‌’ಕೃತಿ ಬಿಡುಗಡೆ ಮಾಡಿದರು. ಅನುವಾದಕ ಸಿದ್ಧು ಯಾಪಲಪರವಿ ಇದ್ದಾರೆ.
ಲೇಖಕ ವಿಶ್ವಾಸ ಮುದಗಲ್ (ಬಲ) ಅವರು ಗದುಗಿನಲ್ಲಿ ತಮ್ಮ ‘ದಿ ಲಾಸ್ಟ್ ಅವತಾರ್‌’ಕೃತಿ ಬಿಡುಗಡೆ ಮಾಡಿದರು. ಅನುವಾದಕ ಸಿದ್ಧು ಯಾಪಲಪರವಿ ಇದ್ದಾರೆ.   

ಗದಗ:‘ವಿಷ್ಣುವಿನ ಹತ್ತನೆಯ ಹಾಗೂ ಕೊನೆಯ ಅವತಾರವಾದ ಕಲ್ಕಿಯನ್ನು ಆಧುನಿಕ ಸಂದರ್ಭಕ್ಕೆ ಮುಖಾಮುಖಿಯಾಗಿಸುವ ಪ್ರಯತ್ನವನ್ನು‘ದಿ ಲಾಸ್ಟ್ ಅವತಾರ್‌’ಕೃತಿಯಲ್ಲಿ ಮಾಡಲಾಗಿದೆ’ಎಂದು ಇಂಗ್ಲಿಷ್‌ ಲೇಖಕ ಗದಗ ಮೂಲದ ವಿಶ್ವಾಸ ಮುದಗಲ್ ಹೇಳಿದರು.

ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಅಧರ್ಮ ಹೆಚ್ಚಿದಾಗ ವಿಷ್ಣು ಕಲ್ಕಿಯಾಗಿ ಅವತರಿಸಿ ಶಾಂತಿ ನೆಲೆಗೊಳಿಸುತ್ತಾನೆಂದು ನಂಬಿಕೆ ಇದೆ.ಆಧುನಿಕ ಜಗತ್ತಿನ ಸಮಸ್ಯೆಗಳಿಗೆ ಸ್ಪಂದಿಸುವ ಹಾಲಿವುಡ್‍ನ ಬ್ಯಾಟ್‍ಮ್ಯಾನ್, ಸ್ಪೈಡರ್‌ಮ್ಯಾನ್‌ನಂತೆ ‘ಕಲ್ಕಿ’ಯನ್ನು ಭಾರತದ ಸೂಪರ್‌ ಹೀರೊ ಆಗಿ ಈ ಕೃತಿಯಲ್ಲಿ ಚಿತ್ರಿಸಲಾಗಿದೆ’ಎಂದು ಅವರು ಹೇಳಿದರು.

‘8 ವರ್ಷ ಸತತ ಅಧ್ಯಯನ,ಸಂಶೋಧನೆ ನಡೆಸಿದ ನಂತರ ಈ ಕೃತಿಯನ್ನು ರೂಪಿಸಲು ಸಾಧ್ಯವಾಯಿತು.ತಮ್ಮ ಮೊದಲ ಇಂಗ್ಲಿಷ್‌ ಕಾದಂಬರಿ ‘ಲೂಸಿಂಗ್ ಮೈ ರಿಲಿಜನ್' ಸಹ ಅಮೆಜಾನ್‌ ತಾಣದಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದು. ಈ ಕೃತಿಯನ್ನು ಲೇಖಕ ಸಿದ್ಧು ಯಾಪಲಪರವಿ ಅವರು ‘ಒಂದು ಬಿರುಗಾಳಿಯ ಕತೆ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ಲಾಸ್ಟ್ ಅವತಾರ್‌’ ಕಾದಂಬರಿಯನ್ನೂ ಅವರೇ ಅನುವಾದಿಸಲಿದ್ದು, ಶೀಘ್ರದಲ್ಲೇ ಕನ್ನಡದ ಓದುಗರಿಗೆ ಲಭ್ಯವಾಗಲಿದೆ’ಎಂದರು.

ADVERTISEMENT

ಅನುವಾದಕ ಸಿದ್ಧು ಯಾಪಲಪರವಿ, ಡಾ. ಎಚ್. ಬಿ.. ಪೂಜಾರ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.