
ಪ್ರಜಾವಾಣಿ ವಾರ್ತೆ
ಗದಗ: ಇಲ್ಲಿನ ಶಹರ ಪೊಲೀಸ್ ಠಾಣೆಯ ಎಎಸ್ಐ ಸಿ.ವಿ.ಇಂಗಳಹಳ್ಳಿ ಅವರು ₹10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಗರದ ನಿವಾಸಿ ವೀರೇಶ ಪೂಜಾರ ತನ್ನ ತಾಯಿ ಹೆಸರಿನಲ್ಲಿ ಗದಗ ಶಹರ ಠಾಣೆಗೆ ಅನಾಮಧೇಯ ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಲು ಕೋರಿದ್ದರು. ಅದಕ್ಕೆ ಎಎಸ್ಐ ಇಂಗಳಹಳ್ಳಿ ₹13 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಬುಧವಾರ ಪೊಲೀಸ್ ಠಾಣೆಯಲ್ಲೇ ₹10 ಸಾವಿರ ಲಂಚ ಪಡೆಯುವ ವೇಳೆ ಎಎಸ್‌ಐ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.