ADVERTISEMENT

ಶಾಸಕ ಚಂದ್ರು ಲಮಾಣಿ: ವೇಗವಾಗಿ ಬೆಳೆದು ಮುಗ್ಗರಿಸಿದರು!

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 7:01 IST
Last Updated 22 ಫೆಬ್ರುವರಿ 2026, 7:01 IST
<div class="paragraphs"><p>ಶಾಸಕ ಚಂದ್ರು ಲಮಾಣಿ</p></div>

ಶಾಸಕ ಚಂದ್ರು ಲಮಾಣಿ

   

ಗದಗ: ಸರ್ಕಾರಿ ವೈದ್ಯರಾಗಿದ್ದ ಚಂದ್ರು ಲಮಾಣಿ ಅವರು ಯಾವುದೇ ‘ಗಾಢ್‌
ಫಾದರ್‌’ ಇಲ್ಲದೇ ಅತ್ಯಲ್ಪ ಸಮಯದಲ್ಲೇ ರಾಜಕೀಯವಾಗಿ ಉನ್ನತಿಗೆ ಏರಿದ್ದರು.  

ಮುಂಡರಗಿ ತಾಲ್ಲೂಕಿನ ದಿಂಡೂರು ತಾಂಡಾದ ಚಂದ್ರು ಲಮಾಣಿ ರಾಜಕಾರಣಿ ಆಗುವುದಕ್ಕೂ ಮುನ್ನ ಶಿರಹಟ್ಟಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿದ್ದರು. ಆಗ ಹೊರರೋಗಿ ವಿಭಾಗದ ಚೀಟಿ ಮಾಡುವ ಹಣದಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಆ ನಂತರ, ನೌಕರಿಗೆ ರಾಜೀನಾಮೆ ನೀಡಿ, ಲಕ್ಷ್ಮೇಶ್ವರ ‍ಪಟ್ಟಣದಲ್ಲಿ ಬಾಲಾಜಿ ಆಸ್ಪತ್ರೆಯನ್ನು ಆರಂಭಿಸಿದ್ದರು.

ADVERTISEMENT

ಮೊದಲ ಯತ್ನದಲ್ಲೇ ಗೆಲುವು

ಕೋವಿಡ್‌ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜನೆ, ಉಚಿತ ಆರೋಗ್ಯ ತಪಾಸಣೆ, ಆಹಾರ ಕಿಟ್‌ ವಿತರಣೆ ಮಾಡುವ ಮೂಲಕ ಜನರ ಮನಗೆದ್ದಿದ್ದರು. ಅದನ್ನೇ ಚಿಮ್ಮುಹಲಗೆ ಮಾಡಿಕೊಂಡು ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದರು.

2018–23ರ ಅವಧಿಯಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ರಾಮಣ್ಣ ಲಮಾಣಿ ಕಾರ್ಯಕರ್ತರ ಅಸಮಾಧಾನಕ್ಕೆ ಗುರಿಯಾಗಿದ್ದರು. ಆಗ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದ ರಾಮಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್‌ ಕೈ ತಪ್ಪಿದ್ದರಿಂದ ಪ್ರತಿಸ್ಪರ್ಧಿ ಪಕ್ಷದಲ್ಲೂ ಭಿನ್ನಮತ ಸ್ಫೋಟಗೊಂಡಿತ್ತು. 

ಬಿಜೆಪಿ ಕಾರ್ಯಕರ್ತರ ಅಸಮಾಧಾನ, ಪ್ರತಿಸ್ಪರ್ಧಿ ಪಕ್ಷದ ಭಿನ್ನಮತದ ಒಡಕಿನ ಲಾಭದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ 2023ರ ಚುನಾವಣೆಯಲ್ಲಿ 74,489 ಮತಗಳನ್ನು ಪಡೆಯುವ ಮೂಲಕ 28,520 ಮತಗಳ ಅಂತರದ  ಗೆಲುವು ದಾಖಲಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.