
ನರಗುಂದ: ಆಧುನಿಕ ಜಗತ್ತು ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೂ ಶಾಂತಿ, ನೆಮ್ಮದಿಯಿಲ್ಲದ ಜೀವನ ನಡೆಸುವಂತಾಗಿದೆ. ಅದರಲ್ಲೂ ಮೊಬೈಲ್ ಬದುಕನ್ನೇ ಕಸಿಯುತ್ತಿದೆ. ಮೊಬೈಲ್ ಗೀಳು ಯುವಕರ ಬಾಳು ಹಾಳು ಮಾಡುತ್ತಿದೆ ಎಂದು ಹಳಿಯಾಳ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಪದ್ಮಾಜಿ ಹೇಳಿದರು.
ಪಟ್ಟಣದ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಶಿವರಾತ್ರಿಯ ಎರಡನೇ ದಿನದ ಕಾರ್ಯಕ್ರಮ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸವದತ್ತಿಯ ಸಾಹಿತಿ ವೈ.ಎಂ.ಯಾಕೊಳ್ಳಿ ಮಾತನಾಡಿ ಅಧ್ಯಾತ್ಮವಿಲ್ಲದ ಜೀವನ ನಿರರ್ಥಕ ಎಂದರು. ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಎಸ್.ಕೆ.ಇನಾಮದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಕಂಬಳಿ, ಬ್ರಹ್ಮ ಕುಮಾರಿ ಪ್ರಭಕ್ಕ, ಪತ್ರಕರ್ತರ ಸಂಘದ ಅಧ್ಯಕ್ಷ ಸಂಗನಗೌಡ ಖಾನಪ್ಪಗೌಡ್ರ, ದೊಡಲಿಂಗಪ್ಪನವರ, ಎಸ್ವೈಎಸ್ ಬಿ.ಇಡಿ ಕಾಲೇಜು ಪ್ರಾಚಾರ್ಯ ಆರ್.ಬಿ.ಪಾಟೀಲ, ವಿ.ಎಸ್.ವೀರನಗೌಡ್ರ, ಇದ್ದರು. ಹನಮಂತ ಮಾದರ ನಿರೂಪಿಸಿ,ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.