
ಮುಂಡರಗಿ: ‘ದೇಶ ರಕ್ಷಣೆಗೆ ನಮ್ಮ ಸೈನಿಕರು ನೀಡಿದ ಬಲಿದಾನ ಅಮರವಾಗಿದ್ದು, ಅವರ ತ್ಯಾಗ, ಬಲಿದಾನಗಳಿಂದ ದೇಶದ ಜನತೆ ಸುರಕ್ಷಿತವಾಗಿದ್ದಾರೆ. ದೇಶಕ್ಕೋಸ್ಕರ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು’ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಾಸಪ್ಪ ಕಾಶಭೋವಿ ಹೇಳಿದರು.
ಮಾಜಿ ಸೈನಿಕರ ಸಂಘವು ಭಾನುವಾರ ಸಂಜೆ ತಾಲ್ಲೂಕಿನ ಡಂಬಳ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಕಚೇರಿಯ ಬಳಿ ಹಮ್ಮಿಕೊಂಡಿದ್ದ ಪುಲ್ವಾಮಾ ಹುತಾತ್ಮರ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದ ಸುಭದ್ರತೆಗೆ ಧಕ್ಕೆ ತರುಲು ಪ್ರಯತ್ನಿಸುವವರನ್ನು ಸೆದೆ ಬಡಿಯುವ ಮೂಲಕ ನಮ್ಮ ಸೈನಿಕರು ದೇಶವನ್ನು ಸಂರಕ್ಷಿಸುತ್ತಿದ್ದಾರೆ’ ಎಂದು ತಿಳಿಸಿದರು.
ಮಾಜಿ ಸೈನಿಕರೆಲ್ಲ ಸೇರಿ ದೇಶದ ಏಕತೆ, ಅಖಂಡತೆ ಹಾಗೂ ಶಾಂತಿಗಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಸ್ಮರಣಾರ್ಥ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು. ‘ಭಾರತ ಮಾತಾ ಕಿ ಜೈ’, ‘ಒಂದೇ ಮಾತರಂ’, ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಕೂಗಿದರು.
ಮಾಜಿ ಸೈನಿಕರಾದ ರೈವಣಸಿದ್ದಯ್ಯ ಮುನವಳ್ಳಿಮಠ, ರಾಘವೇಂದ್ರ ಹಡಪದ, ಕೃಷ್ಣಾ ಕಟ್ಟೇಣ್ಣವರ, ಹನಮಂತಪ್ಪ ಮೇಗುರ, ಮಳ್ಳಪ್ಪ ಆದಮ್ಮನವರ, ಕಾಶಿಮಲಿ ಬೆನಕೊಪ್ಪ, ಭೀಮಪ್ಪ ಪೂಜಾರ, ಈರಪ್ಪ ಹೊಂಬಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.