ADVERTISEMENT

ಮುಂಡರಗಿ | ಕಾಯಿಲೆ ಗುರುತಿಸಲು ಮಕ್ಕಳು ಅಸಮರ್ಥರು: ಡಾ. ಲಕ್ಷ್ಮಣ ಪೂಜಾರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 3:17 IST
Last Updated 11 ಜನವರಿ 2026, 3:17 IST
ಮುಂಡರಗಿ ತಾಲ್ಲೂಕಿನ ರಾಮೇನಹಳ್ಳಿ‌ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆರೋಗ್ಯ‌ ಉಚಿತ ತಪಾಸಣೆ ಶಿಬಿರ ನಡೆಯಿತು 
ಮುಂಡರಗಿ ತಾಲ್ಲೂಕಿನ ರಾಮೇನಹಳ್ಳಿ‌ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆರೋಗ್ಯ‌ ಉಚಿತ ತಪಾಸಣೆ ಶಿಬಿರ ನಡೆಯಿತು    

ಮುಂಡರಗಿ: ‘ಮಕ್ಕಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಪರಿಸ್ಥಿತಿ ತಿಳಿಸಲು ಅಸಮರ್ಥರು. ಪಾಲಕರು ಮಕ್ಕಳ ಅಸಹಜ ವರ್ತನೆ ಗುರುತಿಸಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು’ ಎಂದು ವೈದ್ಯ ಡಾ.ಲಕ್ಷ್ಮಣ ಪೂಜಾರ ತಿಳಿಸಿದರು.

‌ತಾಲ್ಲೂಕಿನ ರಾಮೇನಹಳ್ಳಿ‌ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಲೈಪ್ ಕೇರ್ ಆಸ್ಪತ್ರೆ ಹಾಗೂ ನಳಂದ ಹೊಟೆಲ್‌ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ‌ ಉಚಿತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಮಕ್ಕಳ ವೈದ್ಯ ಡಾ.ಗೊಣೇಶ ಮೇವುಂಡಿ, ಮುಖ್ಯ ಶಿಕ್ಷಕ ನಿಂಗು‌ ಸೊಲಗಿ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ ದಂಡಿನ ಅಧ್ಯಕ್ಷತೆ‌ ವಹಿಸಿದ್ದರು. ಶಿಕ್ಷಕ ಬಿ.ಎಚ್. ಹಲವಾಗಲಿ ಸ್ವಾಗತಿಸಿದರು. ಪಿ.ಎಂ. ಲಾಂಡೆ ನಿರೂಪಿಸಿದರು. ಎಂ.ಆರ್. ಗುಗ್ಗರಿ ವಂದಿಸಿದರು.

ADVERTISEMENT

ಜಗದೀಶ ಸಂಗಟಿ, ಡಾ.ಪ್ರಶಾಂತ, ಸೇತುರಾಮಾಚಾರ್ಯ ಕಟ್ಟಿ, ಬಸವರಾಜ ತಿಗರಿ, ರಂಗಪ್ಪ ಮೇಟಿ, ಸಿದ್ದರಾಮಗೌಡ ಪಾಟೀಲ, ಯಲ್ಲಪ್ಪ‌ ಅಬ್ಬಿಗೇರಿ, ಅಶೋಕ ಕೋಳಿ, ವಿಠಲ ಜಂಬಿಗಿ, ಪರಮೇಶ ದಂಡಿನ, ಜಿತೇಂದ್ರ ಬಾಗಳಿ, ಪ್ರಭಾವತಿ ಗಾಡದ, ಶಿವಲೀಲಾ ಅಬ್ಬಿಗೇರಿ, ಬಸವರಾಜ ಹೆಬಲಿ, ಲಕ್ಷ್ಮಣ ಸಂಗಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.