ADVERTISEMENT

ಗದಗ–ಬೆಟಗೇರಿ ನಗರಸ ಸಭೆ ಚುನಾವಣೆ: 34 ನಾಮಪತ್ರಗಳು ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 5:47 IST
Last Updated 17 ಡಿಸೆಂಬರ್ 2021, 5:47 IST
.df ballari city election logo-21.pdf
.df ballari city election logo-21.pdf   

ಗದಗ: ಅವಳಿ ನಗರ ಗದಗ ಬೆಟಗೇರಿ ನಗರಸಭೆ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆದಿದ್ದು, ಇದರಲ್ಲಿ 34 ನಾಮ‍ಪತ್ರಗಳು ತಿರಸ್ಕೃತಗೊಂಡಿವೆ.

35 ವಾರ್ಡ್‌ಗಳ ನಗರಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ 49, ಬಿಜೆಪಿ 57, ಜೆಡಿಎಸ್ 13, ಪಕ್ಷೇತರ 74, ಕೆಆರ್‌ಎಸ್ 2, ವೆಲ್ಫೇರ್‌ ಪಾರ್ಟಿ ಆಫ್ ಇಂಡಿಯಾ, ಎಐಎಂ, ಎಂಐಎಂಐಎಂ ಹಾಗೂ ಎಎಪಿಯಿಂದ ತಲಾ 1, ಎಐಎಂಐಎಂ 2, ರಾಣಿ ಚನ್ನಮ್ಮ ಪಕ್ಷದಿಂದ 5 ನಾಮಪತ್ರಗಳು ಸೇರಿದಂತೆ ಒಟ್ಟು 206 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 34 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 172 ನಾಮಪತ್ರಗಳು ಕ್ರಮಬದ್ಧವಾಗಿವೆ.

ನಾಮಪತ್ರ ಹಿಂಪಡೆಯಲು ಶುಕ್ರವಾರ (ಡಿ.17) ಅಂತಿಮ ದಿನವಾಗಿದೆ. ಡಿ.27ರಂದು ಮತದಾನ ನಡೆಯಲಿದೆ.

ADVERTISEMENT

‘ವಾರ್ಡ್ ನಂ.1ರಲ್ಲಿ 4, ವಾರ್ಡ್ ನಂ.2ರಲ್ಲಿ 3, ವಾರ್ಡ್ ನಂ.3ರಲ್ಲಿ 1, ವಾರ್ಡ್ ನಂ.4ರಲ್ಲಿ 1, ವಾರ್ಡ್ ನಂ.5ರಲ್ಲಿ 2, ವಾರ್ಡ್ ನಂ.6ರಲ್ಲಿ 2, ವಾರ್ಡ್ ನಂ.9ರಲ್ಲಿ 1, ವಾರ್ಡ್ ನಂ.10ರಲ್ಲಿ 1, ವಾರ್ಡ್ ನಂ.11ರಲ್ಲಿ 3, ವಾರ್ಡ್ ನಂ.12ರಲ್ಲಿ 3, ವಾರ್ಡ್ ನಂ.23ರಲ್ಲಿ 1, ವಾರ್ಡ್ ನಂ.26ರಲ್ಲಿ 2, ವಾರ್ಡ್ ನಂ.29ರಲ್ಲಿ 2, ವಾರ್ಡ್ ನಂ.30ರಲ್ಲಿ 2, ವಾರ್ಡ್ ನಂ.31ರಲ್ಲಿ 3, ವಾರ್ಡ್ ನಂ.32ರಲ್ಲಿ 1, ವಾರ್ಡ್ ನಂ.33ರಲ್ಲಿ 1 ಹಾಗೂ ವಾರ್ಡ್ ನಂ.35ರಲ್ಲಿ ಒಬ್ಬರು ಅಭ್ಯರ್ಥಿಯ ನಾಮಪತ್ರ ಸೇರಿದಂತೆ ಒಟ್ಟು 34 ನಾಮಪತ್ರಗಳು ತಿರಸ್ಕೃತಗೊಂಡಿವೆ’ ಎಂದು ಗದಗ ತಹಶೀಲ್ದಾರ್‌ ಕಿಶನ್ ಕಲಾಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.