
ನರೇಗಲ್: ಪ್ರತಿ ತಂದೆ-ತಾಯಿಯ ತ್ಯಾಗದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಅಡಗಿರುತ್ತದೆ ಎಂದು ನರೇಗಲ್ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸವಿತಕ್ಕ ಹೇಳಿದರು.
ನರೇಗಲ್ ಪಟ್ಟಣದ ಜಗದ್ಗುರು ಪಂಚಾಚಾರ್ಯ ಗ್ರಾಮೀಣಾಭಿವೃದ್ದಿ ಶಿಕ್ಷಣ ಸಂಸ್ಥೆಯ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪಾರಿತೋಷಕ ವಿತರಿಸಿ ಮಾತನಾಡಿದರು.
ಮನೆಯಲ್ಲಿ ತಾಯಿ ಮಗುವಿಗೆ ಸಂಸ್ಕಾರ ನೀಡಿದರೆ ತಂದೆ ಆರ್ಥಿಕ ಸಹಾಯದ ಹಸ್ತಕ್ಕೆ ಮುಂದಾಗುತ್ತಾನೆ. ಇದರಿಂದ ಮಕ್ಕಳು ಮಾನಸಿಕ ನೆಮ್ಮದಿಯೊಂದಿಗೆ ಶೈಕ್ಷಣಿಕ ಪ್ರಗತಿ ಹೊಂದಲು ಸಹಕಾರಿಯಾಗಲಿದೆ. ಪಾಲಕರಾದವರು ಸಾಧ್ಯವಾದಷ್ಟು ಅವರೊಂದಿಗೆ ಹರ್ಷದಿಂದ ಇದ್ದು ಶುಚಿತ್ವದಿಂದ ಉತ್ತಮ ಸಂಸ್ಕಾರಿತ ಚಾರಿತ್ರೆತೆಯ ಮಾತು ಆಡಬೇಕು. ಇದರಿಂದ ಉತ್ತಮ ಪ್ರಜೆಯಾಗಿರೂಪಗೊಳ್ಳುತ್ತಾರೆ ಎಂದರು.
ವಸ್ತು ಪ್ರದರ್ಶನದ ನಿರ್ಣಾಯಕರಾಗಿ ಪಾಲ್ಗೊಂಡ ಎಸ್.ಎ.ವಿ. ಪ್ರೌಢಶಾಲೆ ಮುಖ್ಯಶಿಕ್ಷಕ ಸಂಗಮೇಶ ಹೂಲಗೇರಿ ಮಾತನಾಡಿ, ಮಕ್ಕಳು ನೈತಿಕ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ತಮ್ಮ ಪ್ರತಿಭೆ ತೋರ್ಪಡಿಸುತ್ತಿರುವುದು ಶ್ಲಾಘನೀಯವಾಗಿದೆ. ಇಂದಿನ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಮಕ್ಕಳು ಹಿಂದಿನ ಕಾಲದ ವಸ್ತುಗಳನ್ನು ಸಂಗ್ರಹಿಸಿ ಕಾಲಕ್ಕನುಗುಣವಾಗಿ ಬದಲಾದ ಅವುಗಳ ವಿವಿಧ ಮಾದರಿಗಳನ್ನು ಪ್ರದರ್ಶಿಸಿದ್ದಾರೆ. ನೀರಿನ ಸದ್ಬಳಕೆ, ನೀರು ಸಂಗ್ರಹಣೆ, ವಿದ್ಯುತ್ ಉತ್ಪಾದನೆ ಮತ್ತು ಭಾರತ ದೇಶದ ವಿವಿದ ರಾಜ್ಯಗಳಲ್ಲಿನ ಜೋತಿರ್ಲಿಂಗಗಳ ದರ್ಶನ, ತಮ್ಮ ಶಾಲಾ ಕಟ್ಟಡದ ವಿನ್ಯಾಸ ಸೇರಿದಂತೆ ವಿವಿದ ಮಾದರಿಯ ವಸ್ತುಪ್ರದರ್ಶನದ ಮೂಲಕ ತಮ್ಮ ವಿಚಾರಶಕ್ತಿಯನ್ನು ಅಭಿವೆಕ್ತಿಗೊಳಿಸಿರುವದು ಅವರಲ್ಲಿನ ಪ್ರತಿಭೆಯನ್ನು ತೋರ್ಪಡಿಸಿದ್ದಾರೆ ಎಂದರು.
ನಿವೃತ್ತರಾದ ಸರ್ಕಾರಿ ಶಾಲೆಯ ಶಿಕ್ಷಕ ಬಿ.ವಿ.ದೇಸಾಯಿಪಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಸಂಸ್ಥೆ ಉಪಾಧ್ಯಕ್ಷ ಎಸ್.ಕೆ.ಪಾಟೀಲ, ನಿವೃತ್ತ ಡಯಟ್ ಉಪನ್ಯಾಸಕ ಕೆ.ಪಿ.ಸಾಲಿಮಠ, ರೋಣ ಸಿಆರ್‌ಸಿ ಜ್ಯೋತಿ ಬೇಲೇರಿ, ಆರ್.ಕೆ.ಗಚ್ಚಿನಮಠ, ಶರಣಪ್ಪ ಜುಟ್ಲದ, ಮುಖ್ಯಶಿಕ್ಷಕಿ ನಿರ್ಮಲಾ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.