ಗದಗ: ಶ್ರೀರಾಮ ಸೇನೆ ಹಾಗೂ ಶಿವ ರಾಮ ಕೃಷ್ಣ ಸೇವಾ ಟ್ರಸ್ಟ್ ಹಾಗೂ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಫೆ.19ರಂದು ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ತಿಳಿಸಿದರು.
‘ಛತ್ರಪತಿ ಶಿವಾಜಿ ಜಯಂತ್ಯುತ್ಸವದ ಅಂಗವಾಗಿ ಫೆ. 19ರಂದು ಬೆಳಿಗ್ಗೆ 10ಕ್ಕೆ ನಗರದ ರಾಚೋಟೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದ್ದು, ನಗರದ ವಿವಿಧೆಡೆ ಸಂಚರಿಸಿ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ’ ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಂಜೆ 5ಕ್ಕೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಆವರಣದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಂಸ್ಕೃತಿಕ ಚಿಂತಕಿ ಭಾವನಾ ಆರ್. ಗೌಡ ಜಾಗೃತಿ ನುಡಿಗಳನ್ನಾಡುವರು. ಹಿರಿಯ ಸ್ವಾಮೀಜಿಗಳು, ರಾಷ್ಟ್ರಾಭಿಮಾನಿಗಳು, ಸಾಂಸ್ಕೃತಿಕ ಚಿಂತಕರು, ಸಮಾಜ ಸುಧಾರಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು’ ಎಂದು ತಿಳಿಸಿದರು.
ಶಿವಯೋಗಿ ಹಿರೇಮಠ, ಹುಲಗಪ್ಪ ವಾಲ್ಮೀಕಿ, ಸೋಮಪ್ಪ ಗುಡಿ, ವಿರುಪಾಕ್ಷಪ್ಪ ಹೆಬ್ಬಳ್ಳಿ, ಸಿದ್ದು ಜೀವನಗೌಡ್ರ, ವಿಜಯಕುಮಾರ ಕಟ್ಟಿ, ಶಿವಕುಮಾರ ದೇವದುರ್ಗಮಠ, ಸತೀಶ ಕುಂಬಾರ, ಮೌನೇಶ ದಾಸರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.