ADVERTISEMENT

ವಕೀಲರ ದೂರವಾಣಿ ಕೈಪಿಡಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 6:58 IST
Last Updated 26 ಅಕ್ಟೋಬರ್ 2025, 6:58 IST
ನರಗುಂದ ಜೆಎಂಎಫ್‌ಸಿ ನ್ಯಾಯಾಲಯದ ವಕೀಲರ ಸಂಘದ ಕಚೇರಿಯಲ್ಲಿ ಜಿಲ್ಲಾ ವಕೀಲರ ದೂರವಾಣಿ ಸಂಖ್ಯೆಯ ಕೈಪಿಡಿಯನ್ನು ರಾಜ್ಯ ವಕೀಲರ ಪರಿಷತ್ ರಾಜ್ಯ ಘಟಕ ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ ಬಿಡುಗಡೆಗೊಳಿಸಿದರು 
ನರಗುಂದ ಜೆಎಂಎಫ್‌ಸಿ ನ್ಯಾಯಾಲಯದ ವಕೀಲರ ಸಂಘದ ಕಚೇರಿಯಲ್ಲಿ ಜಿಲ್ಲಾ ವಕೀಲರ ದೂರವಾಣಿ ಸಂಖ್ಯೆಯ ಕೈಪಿಡಿಯನ್ನು ರಾಜ್ಯ ವಕೀಲರ ಪರಿಷತ್ ರಾಜ್ಯ ಘಟಕ ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ ಬಿಡುಗಡೆಗೊಳಿಸಿದರು    

ನರಗುಂದ: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ವಕೀಲರ ಸಂಘದ ಕಚೇರಿಯಲ್ಲಿ ಜಿಲ್ಲಾ ವಕೀಲರ ದೂರವಾಣಿ ಸಂಖ್ಯೆಯ ಕೈಪಿಡಿಯನ್ನು ರಾಜ್ಯ ವಕೀಲರ ಪರಿಷತ್ ರಾಜ್ಯ ಘಟಕ ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ ಗುರುವಾರ ಬಿಡುಗಡೆಗೊಳಿಸಿದರು.

ಎಸ್.ಎಸ್. ಮಿಟ್ಟಲಕೋಡ ಮಾತನಾಡಿ, ‘ಪಟ್ಟಣದಲ್ಲಿ ವಕೀಲ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸುವ ಕುರಿತು ಕ್ರಮಕೈಗೊಳ್ಳಲಾಗುವುದು. ಹಿರಿಯ ಶ್ರೇಣಿಯ ನ್ಯಾಯಾಲಯ ಸ್ಥಾಪನೆಯ ಮಂಜೂರಾತಿಯ ಆದೇಶ ನೀಡುವಂತೆ ಮನವಿ ಮಾಡಲಾಗಿದ್ದು, ಬೇಡಿಕೆ ಶೀಘ್ರದಲ್ಲಿ ನೆರವೇರಲಿದೆ’ ಎಂದರು.

ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಎಸ್. ದೇಶಪಾಂಡೆ, ಕಾರ್ಯದರ್ಶಿ ಪಿ.ಎಸ್. ಹುಂಬಿ, ಎಂ.ಟಿ‌. ಪಾಟೀಲ, ಸಿ.ಎಸ್. ಪಾಟೀಲ, ಎಸ್.ಕೆ. ಹರಪನಹಳ್ಳಿ, ಕೆ.ಎಸ್. ಹೂಲಿ, ಎಂ.ಬಿ. ಕುಲಕರ್ಣಿ, ಬಿ.ಎನ್. ಭೋಸಲೆ, ಎಸ್.ಎಸ್. ಆದೆಪ್ಪನವರ, ವಿ.ಎ. ಮೂಲಿಮನಿ, ಜಿ.ಹೆಚ್. ಕಗದಾಳ, ಎಸ್.ಎಸ್. ಅಂಗಡಿ, ಆರ್.ಸಿ. ಪಾಟೀಲ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.