ADVERTISEMENT

ಭೀಮಸೇನ ಜೋಶಿ ಜನ್ಮಶತಾಬ್ದಿ: ನಾಳೆ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 14:08 IST
Last Updated 3 ಫೆಬ್ರುವರಿ 2021, 14:08 IST
ಡಾ. ಭೀಮಸೇನ ಜೋಶಿ
ಡಾ. ಭೀಮಸೇನ ಜೋಶಿ   

ಗದಗ: ಭಾರತ ರತ್ನ ಡಾ. ಭೀಮಸೇನ ಜೋಶಿ ಅವರ ಜನ್ಮಶತಾಬ್ದಿ ಅಂಗವಾಗಿ ಪುಣೆಯ ಸಂಗೀತಾಚಾರ್ಯ ಕಾಣೆ ಬುವಾ ಪ್ರತಿಷ್ಠಾನದ ವತಿಯಿಂದ ಫೆ. 4ರಂದು ಸಂಜೆ 6ಕ್ಕೆ ಗದುಗಿನ ವೀರನಾರಾಯಣ ದೇವಸ್ಥಾನದ ಆವರಣದಲ್ಲಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಯಾಗಿ ಪಂಡಿತ್‌ ಎಂ. ವೆಂಕಟೇಶಕುಮಾರ, ಕಿರ್ಲೋಸ್ಕರ್‌ ಇಂಡಸ್ಟ್ರಿಯ ಆರ್.ವಿ.ಗುಮಾಸ್ತೆ, ಪಂಡಿತ ಭೀಮಸೇನ ಜೋಶಿ ಅವರ ಶಿಷ್ಯರಾದ ಪಂಡಿತ ಅರವಿಂದ ಹುಯಿಲಗೋಳಕರ, ಸುಶಿಲೇಂದ್ರ ಜೋಶಿ ಭಾಗವಹಿಸಲಿದ್ದಾರೆ.

ಅತಿಥಿ ಕಲಾವಿದರಾಗಿ ಅಂತರರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಸಂಗೀತ ಕಲಾವಿದೆ ವಿದುಷಿ ಮಂಜುಷಾ ಪಾಟೀಲ ಪುಣೆ, ಐಶ್ವರ್ಯ ದೇಸಾಯಿ, ತಬಲಾ ಮಾಂತ್ರಿಕ ಪದ್ಮಶ್ರೀ ವಿಜಯ ಘಾಟೆ, ಪ್ರತಿಭಾವಂತ ತಬಲಾವಾದಕ ಕೇಶವ ಜೋಶಿ, ಸಂವಾದಿನಿ ಸಾಥ್‍ನಲ್ಲಿ ಗುರುಪ್ರಸಾದ ಹೆಗಡೆ ಭಾಗವಹಿಸುವರು. ಹೊಂಬಾಳಿ ಕಲಾ ಅಕಾಡೆಮಿಯ ಮಂಜರಿ ಹೊಂಬಾಳಿ ಕಾರ್ಯಕ್ರಮ ನಿರ್ವಹಿಸುವರುಎಂದುಪ್ರಕಟಣೆತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.