ADVERTISEMENT

ರೇಣುಕಾಚಾರ್ಯರ ಜಯಂತಿ: ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 13:45 IST
Last Updated 14 ಏಪ್ರಿಲ್ 2025, 13:45 IST

ಲಕ್ಷ್ಮೇಶ್ವರ: ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ರೇಣುಕಾಚಾರ್ಯರ ಜಯಂತಿ ಆಚರಿಸುವ ಕುರಿತು ಚರ್ಚಿಸುವ ನಿಮಿತ್ತ ಪೂರ್ವಭಾವಿ ಸಭೆ ಜರುಗಿತು.

ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ ‘ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಏ. 28ರಂದು ಸೊಪ್ಪಿನಕೇರಿಯ ಇಟಗಿ ಬಸವೇಶ್ವರ ದೇವಸ್ಥಾನದಿಂದ ರೇಣುಕಾಚಾರ್ಯ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಮೆರವಣಿಗೆಯು ಪಾದಗಟ್ಟಿ, ಹಾವಳಿ ಆಂಜನೇಯ ದೇವಸ್ಥಾನ, ವಿದ್ಯಾರಣ್ಯ ವೃತ್ತ, ಬಸ್ತಿಕೇರಿ, ಪಂಪವೃತ್ತ ಮುಖಾಂತರ ಸಂಚರಿಸಿ ರಂಭಾಪುರಿ ಕಲ್ಯಾಣ ಮಂಟಪಕ್ಕೆ ಆಗಮಿಸಲಿದೆ. ನಂತರ ಧರ್ಮಸಭೆ ಜರುಗುವುದು’ ಎಂದು ಹೇಳಿದರು.

ಮುಕ್ತಿಮಂದಿರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಸಭೆಯ ಸಾನ್ನಿಧ್ಯ ವಹಿಸುವರು. ಕರೇವಾಡಿಮಠದ ಮಳೆ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಅನೇಕ ರಾಜಕೀಯ, ಮುಖಂಡರು ಗಣ್ಯರು ಜನಪ್ರತಿನಿಧಿಗಳು ಬಾಗವಹಿಸುವರು’ ಎಂದು ತಿಳಿಸಿದರು.

ADVERTISEMENT

ಸಭೆಯಲ್ಲಿ ಎ.ಎಂ. ಮೆಕ್ಕಿ, ಎಸ್.ಎಸ್. ಬಾಳೆಹಳ್ಳಿಮಠ, ಕುಬೇರಪ್ಪ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ಬಸವೇಶ ಮಹಾಂತಶೆಟ್ಟರ, ಸಿ.ಆರ್. ಲಕ್ಕುಂಡಿಮಠ, ಚನ್ನಪ್ಪ ಕೋಲಕಾರ, ರುದ್ರುಸ್ವಾಮಿ ಘಂಟಾಮಠ, ಎಸ್.ವಿ. ಅಂಗಡಿ, ಬಸವರಾಜ ಬೆಂಡಿಗೇರಿ, ಗಂಗಾಧರ ಮೆಣಸಿನಕಾಯಿ, ಐ.ಸಿ. ಹತ್ತಿಕಾಳ, ಎನ್.ವಿ. ಹೇಮಗಿರಿಮಠ, ಎಂ.ಕೆ. ಕಳ್ಳಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.