ADVERTISEMENT

ಗಜೇಂದ್ರಗಡ | ಒಳ ಮೀಸಲಾತಿಗೆ ವಿರೋಧ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:22 IST
Last Updated 22 ಆಗಸ್ಟ್ 2025, 4:22 IST
ಗಜೇಂದ್ರಗಡ ತಾಲ್ಲೂಕಿನ ಲಂಬಾಣಿ, ಭೋವಿ, ಭಜಂತ್ರಿ ಕೊರಮ ಸೇರಿದಂತೆ 63 ಸಮಾಜಗಳ ಮುಖಂಡರು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸಿರುವುದನ್ನು ವಿರೋಧಿಸಿ ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು
ಗಜೇಂದ್ರಗಡ ತಾಲ್ಲೂಕಿನ ಲಂಬಾಣಿ, ಭೋವಿ, ಭಜಂತ್ರಿ ಕೊರಮ ಸೇರಿದಂತೆ 63 ಸಮಾಜಗಳ ಮುಖಂಡರು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸಿರುವುದನ್ನು ವಿರೋಧಿಸಿ ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು   

ಗಜೇಂದ್ರಗಡ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸಿರುವುದನ್ನು ವಿರೋಧಿಸಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ತಾಲ್ಲೂಕಿನ ಲಂಬಾಣಿ, ಭೋವಿ, ಭಜಂತ್ರಿ ಕೊರಮ ಸೇರಿದಂತೆ 63 ಸಮಾಜಗಳ ಜನರು ಪ್ರತಿಭಟನೆ ನಡೆಸಿದರು.

‘ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತಾದ ವರದಿ ಅವೈಜ್ಞಾನಿಕವಾಗಿದ್ದು, ದಲಿತ ಸಮುದಾಯದಲ್ಲಿ ಒಡಕು ಮೂಡಿಸಲಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ನಿರಂತರ ಅನ್ಯಾಯಕ್ಕೆ ಒಳಗಾಗಿ, ಅಸ್ಪೃಶ್ಯರಾಗಿರುವ ನಮ್ಮ ಸಮುದಾಯಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಮತ್ತೊಮ್ಮೆ ಅನ್ಯಾಯ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಒಳ ಮೀಸಲಾತಿ ಜಾರಿ ಮಾಡುತ್ತಿದೆ. ಇದರ ಹಿಂದೆ ಅಡಗಿರುವ ಹುನ್ನಾರ ಅರಿತು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹಠಾವೋ ಮೀಸಲಾತಿ ಬಚಾವೋ ಅಭಿಯಾನ ಆರಂಭಿಸುತ್ತೇವೆ’ ಎಂದು ಸರ್ಕಾರದ ವಿರುದ್ಧ ಹಲವು ನಾಯಕರು ಹರಿಹಾಯ್ದರು.

ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಆರ್.ಕೆ. ಚವ್ಹಾಣ, ರವಿನಾಥ ಅಂಗಡಿ, ಚಂದ್ರಕಾಂತ ಚವ್ಹಾಣ, ಬಸವರಾಜ ಬಂಕದ, ದುರಗಪ್ಪ ಮುಧೋಳ, ಪ್ರಶಾಂತ ರಾಠೋಡ, ಈಶಪ್ಪ ರಾಠೋಡ, ಪ್ರಶಾಂತ ಗುಗಲೋತ್ತರ, ವೀರೇಶ ರಾಠೋಡ, ಯಲ್ಲಪ್ಪ ಬಂಕದ, ಉಮೇಶ ರಾಠೋಡ, ನಾಗಪ್ಪ ಭಜಂತ್ರಿ, ವೆಂಕಟೇಶ ಮುದಗಲ್ಲ, ತಿಮ್ಮಣ್ಣ ಮಾಳಗಿಮನಿ, ರವಿ ಭಜಂತ್ರಿ, ಮಹಾಂತೇಶ ಪೂಜಾರ, ಹನಮಂತಪ್ಪ ಕಲ್ಲೊಡ್ಡರ, ಶಿವಕುಮಾರ ಜಾಧವ, ಕುಬೇರ ರಾಠೋಡ, ಕುಮಾರ ರಾಠೋಡ, ಕಳಕಪ್ಪ ಮನ್ನೆರಾಳ, ಶರಣಪ್ಪ ಚಳಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.