ADVERTISEMENT

ನರಗುಂದ: ರೋಟರ್ಯಾಕ್ಟ್ ಶಾಲೆಯಲ್ಲಿ ಆರಂಭೋತ್ಸವ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 14:20 IST
Last Updated 1 ಜೂನ್ 2025, 14:20 IST
ನರಗುಂದದಲ್ಲಿ ರೋಟರ್ಯಾಕ್ಟ್‌ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾ ಆರಂಭೋತ್ಸವ ನಡೆಯಿತು
ನರಗುಂದದಲ್ಲಿ ರೋಟರ್ಯಾಕ್ಟ್‌ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾ ಆರಂಭೋತ್ಸವ ನಡೆಯಿತು   

ನರಗುಂದ: ಪಟ್ಟಣದ ರೋಟರ್ಯಾಕ್ಟ್‌ ಕನ್ನಡ ಮಾಧ್ಯಮ ಶಾಲೆಯಲ್ಲಿ ಶನಿವಾರ ಶಾಲಾ ಆರಂಭೋತ್ಸವ ನಡೆಯಿತು.

ಆರಂಭೋತ್ಸವಕ್ಕೆ ಕಾರ್ಯದರ್ಶಿ ರಾಜು ಕಲಾಲ ಚಾಲನೆ ನೀಡಿ ಮಾತನಾಡಿದ ಅವರು, ‘ಬೇಸಿಗೆ ರಜೆ ಮುಗಿದಿದೆ. ಮಕ್ಕಳು ತಪ್ಪದೆ ಶಾಲೆಗೆ ಬರಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಗುರುಗಳು ಹೇಳಿದ ಅಭ್ಯಾಸದ ಕಡೆಗೆ ಗಮನ ಹರಿಸಬೇಕು. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು’ ಎಂದರು.

ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಯಿತು. ಮುಖ್ಯ ಶಿಕ್ಷಕ ಪಿ.ವಿ. ಕೆಂಚನಗೌಡ್ರ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಎಫ್.ವಿ. ಶೀರುಂದಮಠ. ಶಾಲಾ ಸಂಯೋಜಕ ಬಿ ಎಸ್ ಕಬಾಡ್ರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.