
ಪ್ರಜಾವಾಣಿ ವಾರ್ತೆ
ಲಕ್ಷ್ಮೇಶ್ವರ (ಗದಗ ಜಿಲ್ಲೆ): ಚಾಲಕ ಮತ್ತು ಸಹಾಯಕನ ನಿರ್ಲಕ್ಷ್ಯದಿಂದ ತಾಲ್ಲೂಕಿನ ಉಳ್ಳಟ್ಟಿ ಗ್ರಾಮದ ಖಾಸಗಿ ಶಾಲೆಯ ಎಲ್‍ಕೆಜಿ ವಿದ್ಯಾರ್ಥಿ ಪ್ರಥಮ್ ಅರುಣ ಲಮಾಣಿ (4) ಶಾಲಾ ವಾಹನದಿಂದ ಕೆಳಗಡೆ ಬಿದ್ದು ಮೃತಪಟ್ಟಿದ್ದಾನೆ.
‘ದೊಡ್ಡೂರು ಗ್ರಾಮದ ಪ್ರಥಮ್, ಶಾಲೆಯಿಂದ ಮನೆಗೆ ಹಿಂದಿರುಗುವ ವೇಳೆ ಚಾಲಕ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದಾನೆ. ಜತೆಗೆ ವಾಹನದ ಸಹಾಯಕ ಬಾಗಿಲು ಹಾಕಿರಲಿಲ್ಲ. ಅಡ್ಡಾದಿಡ್ಡಿ ಚಾಲನೆಯಿಂದ ವಾಹನದಿಂದ ಕೆಳಕ್ಕೆ ಬಿದ್ದ ಪ್ರಥಮ್ ಮೇಲೆ ವಾಹನದ ಹಿಂದಿನ ಚಕ್ರ ಹರಿದಿದೆ. ಸ್ಥಳದಲ್ಲೇ ಮೃತಪಟ್ಟ ಆತನನ್ನು ಬಸ್ ಒಳಗೆ ಹಾಕಿ, ಚಾಲಕ ಮತ್ತು ಸಹಾಯಕ ಪರಾರಿ ಆಗಿದ್ದಾರೆ’ ಎಂದು ಅವರು ಲಕ್ಷ್ಮೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.