ಗದಗ: ‘ವೈಜ್ಞಾನಿಕ ಸಂಶೋಧನೆಗಳು ವಸ್ತುಗಳ ಅಂತಃಶಕ್ತಿ ಅನಾವರಣಗೊಳಿಸುವುದನ್ನೇ ಗುರಿಯಾಗಿಸಿಕೊಳ್ಳಬೇಕು. ಹಲವು ಕ್ಷೇತ್ರಗಳ ಸಮಸ್ಯೆಗಳ ಪರಿಹಾರಕ್ಕೆ ಸಂಶೋಧನೆಗಳು ಸಹಾಯ ಆಗಬೇಕು’ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ ಕಾರ್ಣಿಕ್ ಹೇಳಿದರು.
ನಗರದ ಕೆಎಸ್‌ಎಸ್ ಮಹಾವಿದ್ಯಾಲಯದ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದಲ್ಲಿ ‘ಸ್ಪೆಕ್ಟ್ರೋಸ್ಕೋಪಿ ಇನ್ ಮಾಡರ್ನ್ ಸೈನ್ಸ್’ ವಿಷಯ ಕುರಿತು ನಡೆದ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ‘ವಿಚಾರ ಸಂಕಿರಣಗಳು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಬೇಕು. ಎಲ್ಲರೂ ಸಂಶೋಧನೆಗಳಲ್ಲಿ ತೊಡಗಿ ಸತ್ಯ ತಿಳಿಸಬೇಕು’ ಎಂದರು.
ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್.ದಂಡಿನ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಹಾಗೂ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದರ್ಶಿ ರವಿ ಬಿ. ದಂಡಿನ, ಗದಗ ಜಿಲ್ಲಾ ಎಬಿವಿಪಿ ಅಧ್ಯಕ್ಷ ಡಾ. ಪುನೀತ ಕುಮಾರ ಬೆನಕನವಾರಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಳಗಾವಿಯ ಆರ್.ಎಲ್.ಎಸ್. ಕಾಲೇಜಿನ ಪ್ರಾಧ್ಯಾಪಕ ಡಾ. ಸತೀಶ ಎಂ.ಪಿ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ವಿನಾಯಕ ಕಾಮತ್ ವಿಷಯ ಮಂಡಿಸಿದರು.
ವಿವಿಧ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಂದ ಬಂದಿದ್ದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಮಹಾವಿದ್ಯಾಲಯರಾದ ಪ್ರಾಚಾರ್ಯ ಎನ್.ಎಂ.ಅಂಬಲಿ, ಪ್ರೊ. ಸೂಜಿ, ಪ್ರೊ. ಎಸ್.ಕೆ.ವಂಡಕರ, ಡಾ. ಎನ್.ಬಿ.ಸಂಗಳದ, ಐಕ್ಯೂಎಸಿ ಸಂಯೋಜಕ ಡಾ. ಎಂ.ಬಿ.ಗೌಡರ, ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಮುಖ್ಯ ಸಂಯೋಜಕ ಡಾ. ಜಿ.ಸಿ.ಜಂಪಣ್ಣನವರ, ಸಂಘಟನಾ ಕಾರ್ಯದರ್ಶಿ ಪ್ರೊ.ಗ್ಯಾನಪ್ಪ, ನ್ಯಾಕ್ ಸಂಯೋಜಕ ಪ್ರೊ. ರಾಯ್ಕರ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್.ಎನ್.ವೆಂಕಟಾಪೂರ, ಪ್ರೊ. ಕುಷ್ಟಗಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.