
ಗದಗ: ನಗರದ ತೋಂಟದಾರ್ಯ ವಿದ್ಯಾಪೀಠದ ಸದಸ್ಯ, ಜಗದ್ಗುರು ಕಲ್ಯಾಣ ಕೇಂದ್ರದ ಕಾರ್ಯದರ್ಶಿ ಹಾಗೂ ವಿ.ಎನ್.ಟಿ ರಸ್ತೆಯ ನಿವಾಸಿ ಶಿವರುದ್ರಪ್ಪ ಎಸ್.ಕಳಸಾಪುರಶೆಟ್ರ (73) ಗುರುವಾರ ನಿಧನರಾದರು.
ಪ್ರಗತಿಪರ ಚಿಂತಕರಾಗಿ ಗದುಗಿನ ಶಿವರುದ್ರಪ್ಪ ಸಿದ್ದಲಿಂಗಪ್ಪ ಕಳಸಾಪುರ ಶೆಟ್ಟರೆಂದರೆ ಗದಗ, ಧಾರವಾಡ ಜಿಲ್ಲೆಗೆ ಚಿರಪರಿಚಿತರು. ಇವರು ಗದುಗಿನ ತೋಂಟದಾರ್ಯ ಶ್ರೀಗಳ ಭಕ್ತರಾಗಿದ್ದರು.
ತೋಂಟದಾರ್ಯ ಜಾತ್ರಾ ಮಹೋತ್ಸವದಂದು ತೋಂಟದಾರ್ಯ ಜಗದ್ಗುರುಗಳು ಪ್ರತಿವರ್ಷ ಕಳಸಾಪೂರ ಶೆಟ್ಟರ ಮನೆಯಲ್ಲಿಯೇ ಪೂಜೆ-ಪ್ರಸಾದ ತೀರಿಸಿಕೊಂಡು ಮಠಕ್ಕೆ ಆಗಮಿಸಿದ ನಂತರ ಮಠದ ತೇರು ಸಾಗುತ್ತಿತ್ತು. ಈ ಪದ್ಧತಿ ಸುಮಾರು 250 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ತಮ್ಮ ಕಷ್ಟದ ಪರಿಸ್ಥಿತಿಯಲ್ಲಿಯೂ ಈ ಮನೆತನದವರು ಈ ಪರಂಪರೆಯನ್ನು ಬಹಳ ಭಕ್ತಿ-ಶ್ರದ್ಧೆ-ಅಭಿಮಾನದಿಂದ ನಡೆಸಿಕೊಂಡು ಬಂದಿದ್ದಾರೆ.
ಮೃತರ ಅಂತ್ಯಕ್ರಿಯೆ ಮುಂಡರಗಿ ಪಟ್ಟಣದ ಸಮೀಪದ ಅಳವಂಡಿ ರಸ್ತೆಗೆ ಹೊಂದಿರುವ ಹಟ್ಟಿ ಗ್ರಾಮದ ಅವರ ಸ್ವಂತ ತೋಟದಲ್ಲಿ ಶುಕ್ರವಾರ ಬೆಳಿಗ್ಗೆ 11ಕ್ಕೆ ನೆರವೇರಲಿದೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.