ಬಿಜೆಪಿ
ಮುಂಡರಗಿ: ‘ಜಾತಿಗಳ ಆಧಾರದ ಮೇಲೆ ಹಿಂದೂಗಳನ್ನು ಒಡೆಯುವ ದುರುದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದ ಆಯೋಗದ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಮುಂದಾಗಿದೆ’ ಎಂದು ಬಿಜೆಪಿ ಡಂಬಳ ಮಂಡಳದ ಅಧ್ಯಕ್ಷ ಅಂದಪ್ಪ ಹಾರೂಗೇರಿ ಆರೋಪಿಸಿದರು.
ತಾಲ್ಲೂಕಿನ ಡಂಗಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಿಸಬೇಕು ಎಂದು ಮನವಿ ಮಾಡಿಕೊಂಡರು.
‘ರಾಜ್ಯ ಸರ್ಕಾರ ಕೈಗೊಂಡಿರುವ ಸಮೀಕ್ಷೆಯಲ್ಲಿ ಹಲವು ಗೊಂದಲಗಳಿದ್ದು, ಹಿಂದೂ ಉಪ ಜಾತಿಗಳ ಮುಂದೆ ಕ್ರಿಶ್ಚಿಯನ್ ಧರ್ಮ ಸೇರಿಸುವ ಮೂಲಕ ಸರ್ಕಾರ ಹಿಂದೂಗಳನ್ನು ಒಡೆಯುತ್ತಿದ್ದು, ಈ ಕುರಿತು ಹಿಂದೂ ಸಮುದಾಯ ಜಾಗೃತರಾಗಬೇಕು’ ಎಂದು ತಿಳಿಸಿದರು.
ತೆಲಂಗಾಣ ರಾಜ್ಯದಲ್ಲಿ ಹಿಂದುಳಿದ ವರ್ಗದ ಸಮೀಕ್ಷೆಗೆ 3 ತಿಂಗಳ ಕಾಲಾವಕಾಶ ನೀಡಲಾಗಿದೆ. 7 ಕೋಟಿ ಜನಸಂಖ್ಯೆ ಹೊಂದಿದ ಕರ್ನಾಟಕ ರಾಜ್ಯ ಸರ್ಕಾರ ಯಾವ ಸಿದ್ಧತೆಗಳೀಲ್ಲದೆ ಕೇವಲ 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಸಿದ್ಧವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಗರಾಜ ಕಾಟ್ರಹಳ್ಳಿ, ಭೀರಪ್ಪ ಬಂಡಿ, ವೆಂಕನಗೌಡ ಪಾಟೀಲ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಪಂಚಾಕ್ಷರಿ ಹರ್ಲಾಪೂರಮಠ, ಸೋಮಶೇಖರ ಹಿರೇಮಠ, ಮಲ್ಲಪ್ಪ ಮಠದ, ನಿಂಗಪ್ಪ ಮಾದರ, ಮುತ್ತಣ್ಣ ಚಿನ್ನಪ್ಪಗೌಡರ, ಪ್ರಕಾಶ ಕೋತಂಬ್ರಿ, ಶಿವಾನಂದ ಬಂಡಿ, ಗವಿಯಪ್ಪ ಮಠದ, ಯಮನೂರಪ್ಪ ದೊಡ್ಡಮನಿ, ಲಕ್ಷ್ಮಣ ಬೂದಿಹಾಳ, ಈರಣ್ಣ ಕವಲೂರ, ಷಣ್ಮಖಪ್ಪ ಬಂಗಾರಶೆಟ್ಟರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.