
ನರಗುಂದ: ‘ರಂಗಭೂಮಿ, ನಾಟಕಗಳು ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ. ಬದುಕಿನ ಅಂಕು, ಡೊಂಕುಗಳನ್ನು ಪ್ರತಿಬಿಂಬಿಸುವ ರಂಗಭೂಮಿ ಸಾಮಾಜಿಕ ಪ್ರಗತಿಗೆ ಪೂರಕ’ ಎಂದು ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬೂದಿಹಾಳ ಗ್ರಾಮದಲ್ಲಿ ಶೀದುರ್ಗಾದೇವಿ ಕಾರ್ತಿಕೋತ್ಸವ ನಿಮಿತ್ತ ಈಚೆಗೆ ನಡೆದ ನಾಟಕೋತ್ಸವ ಹಾಗೂ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕೊಣ್ಣೂರ ಗ್ರಾಮದ ಜೈ ಕಿಸಾನ್ ಸಾಂಸ್ಕೃತಿಕ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಈ ವೇಳೆ ‘ಅಣ್ಣನ ಕಣ್ಣೀರು’ ಸಾಮಾಜಿಕ ನಾಟಕ ಪ್ರದರ್ಶಿಸಲಾಯಿತು.
ಪತ್ರಿವನಮಠದ ಸಿದ್ಧವೀರ ಶಿವಯೋಗಿ ಶಿವಾಚಾರ್ಯರು, ಬಾದಾಮಿ ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು, ಬಾಬು ಹಿರೇಹೊಳಿ, ಪಡಿಯಪ್ಪ ಕೊಳ್ಳಿಯವರ, ಸಿದ್ದಪ್ಪ ನರಗುಂದ, ಬಸವರಾಜ ಮಾನೆ, ಕೆ.ಟಿ. ಚವ್ಹಾಣ, ಗೋವಿಂದಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಜೈ ಕಿಸಾನ್ ಸಂಘದ ಅಧ್ಯಕ್ಷ ಚಂದನ್ನವರ, ಎಸ್.ಪಿ. ಶಿರಿಯಪ್ಪಗೌಡ್ರ, ಷಣ್ಮುಖಪ್ಪ ಹಳೇಹೊಳಿ, ಬಸವರಾಜ ಹಾದಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.