
ಲಕ್ಷ್ಮೇಶ್ವರ: ತಾಲ್ಲೂಕಿನಾದ್ಯಂತ ಹೋಳಿ ಹುಣ್ಣಿಮೆಯನ್ನು ಮಂಗಳವಾರ ಸಡಗರ ಸಂಭಮ್ರದಿಂದ ಆಚರಿಸಲಾಯಿತು.
ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹುಣ್ಣಿಮೆಯ ದಿನವೇ ರಂಗ ಪಂಚಮಿ ಆಚರಿಸುವ ಪದ್ಧತಿ ಇದ್ದು, ಹರದಗಟ್ಟಿ, ಅಮರಾಪುರ, ಸುವರ್ಣಗಿರಿ ತಾಂಡಾ, ಯಲ್ಲಾಪುರ ಸೇರಿದಂತೆ ಒಟ್ಟು 14 ಗ್ರಾಮಗಳಲ್ಲಿ ಪ್ರತಿಷ್ಠಾಪಿಸಿದ ಕಾಮನ ಮೂರ್ತಿಯನ್ನು ದಹನ ಮಾಡಲಾಯಿತು. ಯುವಕರು, ಮಕ್ಕಳು ಪರಸ್ಪರ ಬಣ್ಣ ಎರಚಿ ಸಂತಸ ಪಟ್ಟರು.
ಪಟ್ಟಣದ 22 ಸಾರ್ವಜನಿಕ ಸ್ಥಳಗಳಲ್ಲಿ ರತಿ-ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಐದನೇ ದಿನ ಕಾಮದಹನ ಹಾಗೂ ರಂಗ ಪಂಚಮಿ ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.