ADVERTISEMENT

ಗಮನ ಸೆಳೆದ ಬೀದಿ ನಾಟಕ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 12:25 IST
Last Updated 6 ಜೂನ್ 2018, 12:25 IST
ಹೊಳೆನರಸೀಪುರ ವಾಸವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮಂಗಳವಾರ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ನಾಟಕ ಅಭಿನಯಿಸಿ ಗಮನ ಸೆಳೆದರು
ಹೊಳೆನರಸೀಪುರ ವಾಸವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮಂಗಳವಾರ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ನಾಟಕ ಅಭಿನಯಿಸಿ ಗಮನ ಸೆಳೆದರು   

ಹೊಳೆನರಸೀಪುರ: ‘ಪರಿಸರದ ಮೇಲೆ ಜನರು ನಡೆಸುತ್ತಿರುವ ದಾಳಿ ಪ್ರಕೃತಿ ವಿಕೋಪಗಳಿಗೂ ಕಾರಣವಾಗುತ್ತಿವೆ. ಇದನ್ನು ತಡೆಯಲು ಪರಿಸರ ಕಾಪಾಡಿಕೊಳ್ಳಬೇಕು. ಗಿಡಮರಗಳನ್ನು ಉಳಿಸಿ ಬೆಳೆಸಬೇಕು’ ಎಂದು ತಹಶೀಲ್ದಾರ್ ಎಸ್.ಕೆ.ರಾಜು ತಿಳಿಸಿದರು.

ವಾಸವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಲ್ಲಿನ ಸುಭಾಷ್ ವೃತ್ತದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಬೀದಿ ನಾಟಕಕ್ಕೆ ಗಿಡನೆಟ್ಟು ಚಾಲನೆ ನೀಡಿ ಮಾತನಾಡಿದರು.

‘ಬದುಕಿಗೆ ಹಾಗೂ ಉಸಿರಾಟಕ್ಕೆ ಅವಶ್ಯವಾದ ಆಮ್ಲಜನಕವನ್ನು ಗಿಡಮರಗಳು ನೀಡುತ್ತಿದೆ. ಇಂಥ ಗಿಡಮರಗಳನ್ನು ಉಳಿಸಿ ಬೆಳೆಸಲು ನಾವು ಆಸಕ್ತಿ ವಹಿಸುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಉಸಿರಾಡಲು ಸಮಸ್ಯೆಯಾಗಲಿದೆ ಎಂದು ಎಚ್ಚರಿಸಿದರು.

ADVERTISEMENT

ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಆರ್.ರವಿಕುಮಾರ್ ಅವರು, ‘ಪ್ರಕೃತಿ ರಕ್ಷಣೆ, ಗಿಡ ಮರಗಳ ಪೋಷಣೆ ಮಾಡಬೇಕು. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆಮಾಡಿದರು.

ವಿವಿಧ ಗಿಡಮರಗಳ ವೇಷ ತೊಟ್ಟು ಯಾವ ಗಿಡದಿಂದ ಏನು ಪ್ರಯೋಜನ, ಯಾವ ಪ್ರಾಣಿಯಿಂದ ಉಪಯೋಗ, ಪರಿಸರನಾಶವಾದರೆ ಆಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಅಭಿನಯಿಸಿದ ಬೀದಿ ನಾಟಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

ಎಸ್ಐ ಮೋಹನಕೃಷ್ಣ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕಿರಣ್, ಎಸ್. ರಮೇಶ್, ಗೋಕುಲ್, ಮಂಜುನಾಥ್, ಮುಖ್ಯ ಶಿಕ್ಷಕಿ ಪುಣ್ಯವತಿ, ಶಿಕ್ಷಕಿಯರಾದ ನಿರ್ಮಲಾ. ರೇಖಾ, ಸ್ವಾತಿ, ಅಶ್ವಿನಿ, ಶಿಕ್ಷಕ ಕೃಷ್ಣ, ಚಂದ್ರಶೇಖರ್ ಭಾಗವಹಿಸಿದ್ದರು.

ಪರಿಸರ ಜಾಗೃತಿ ಬೀದಿ ನಾಟಕದಲ್ಲಿ ವಿದ್ಯಾರ್ಥಿಗಳಾದ ಕೀರ್ತನಾ, ವಸುಮತಿ, ಲಿಕಿತಾ, ನಿರೂಪ್, ನಂದಿತಾ, ಚಂದ್ರು, ಶ್ರೇಯಸ್ಸ್, ನಾಗಖುಷಿ, ವೈಶಾಖ್, ಗಗನ್‌ಗೌಡರ ಅಭಿನಯ ಗಮನ ಸೆಳೆಯಿತು.

ವಿಶ್ವಪರಿಸರ ದಿನಾಚರಣೆ: ದೊಡ್ಡಕಾಡನೂರು ಜೆಎಸ್‌ಎಸ್‌ ಕಾಲೇಜಿನಲ್ಲಿ ವಿಶ್ವಪರಿಸರ ದಿನಾಚರಣೆ ಆಚಸಿದರು. ಪ್ರಾಂಶುಪಾಲ ಚೌಡಯ್ಯ ಕಟ್ನವಾಡಿ ಪರಿಸರ ನಾಶದಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರಿಸಿ ಗಿಡ ನೆಟ್ಟು ಉಳಿಸಿ ಬೆಳೆಸುವಂತೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.