ADVERTISEMENT

ಪೆಟ್ರೋಲ್ ಬೆಲೆ ಹೆಚ್ಚಳ:ವಿರೋಧ

​ಪ್ರಜಾವಾಣಿ ವಾರ್ತೆ
Published 24 ಮೇ 2012, 5:20 IST
Last Updated 24 ಮೇ 2012, 5:20 IST
ಪೆಟ್ರೋಲ್ ಬೆಲೆ ಹೆಚ್ಚಳ:ವಿರೋಧ
ಪೆಟ್ರೋಲ್ ಬೆಲೆ ಹೆಚ್ಚಳ:ವಿರೋಧ   

ಹಾಸನ: ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ಪೆಟ್ರೋಲ್ ಬೆಲೆಯನ್ನು ರೂ. 7.20  ಹೆಚ್ಚಿಸಿದ ಹಿನ್ನಲೆಯಲ್ಲಿ ಸಂಜೆ 7 ರಿಂದಲೇ ಜನರು ನಗರದ ಪೆಟ್ರೋಲ್ ಬಂಕ್‌ಗಳಿಗೆ ಧಾವಿಸಲು ಆರಂಭಿಸಿದ್ದರು.

ರಾತ್ರಿ ಸುಮಾರು ಹತ್ತು ಗಂಟೆಯವರೆಗೂ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ದೊಡ್ಡ ಸಾಲೇ ಕಂಡು ಬಂದಿತು. ರಾತ್ರಿ 10ಗಂಟೆಯವರೆಗೆ ಮಾತ್ರ ಪೆಟ್ರೋಲ್ ನೀಡುವುದಾಗಿ ಅನೇಕ ಬಂಕ್‌ಗಳ ಮಾಲೀಕರು ತಿಳಿಸಿದ್ದಾರೆ.
 
ಹಟಾತ್ತನೆ ಇಷ್ಟೊಂದು ಬೆಲೆ ಏರಿಸಿದ್ದಕ್ಕೆ ಜಿಲ್ಲೆಯ ಗ್ರಾಹಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪತ್ರಿಕೆ ಜತೆಗೆ ಮಾತನಾಡಿದ ಗ್ರಾಹಕರು ಕೇಂದ್ರದ ವಿರುದ್ಧ ಕಿಡಿಕಾರಿದರು.

`ಸಾರ್ವಜನಿಕರಿಗೆ ತೀವ್ರ ತೊಂದರೆ~

`ಜಾಗತಿಕ ಮಟ್ಟದಲ್ಲಿ ರೂಪಯಿ ಮೌಲ್ಯ ಕುಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೊಲ್ ಬೆಲೆ ಏರಿಸಿದೆ ವರ್ಷದಲ್ಲಿ 4ನೇ ಬಾರಿ ಬೆಲೆ ಹೆಚ್ಚಿಸಿ ರುವುದರಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗಿದೆ, ಮುಂದಿನ ದಿನಗಳು ಸೈಕಲ್‌ನಲ್ಲಿ ಓಡಾಡುವುದು ಅನಿವಾರ್ಯವಾಗಲಿದೆ.
 -ಪೆಟ್ರೋಲ್ ಬಂಕ್ ಮಾಲೀಕ ಶಿವಣ್ಣ

`ಅರ್ಥವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ~

`ಪೆಟ್ರೋಲ್ ಬೆಲೆ ಪದೇಪದೇ ಏರಿಸುವುದರಿಂದ ತುಂಬ ತೊಂದರೆಯಾಗು ತ್ತದೆ. ಸಮಯ ಉಳಿಸಲು ದ್ವಿಚಕ್ರ ವಾಹನದ ಮೊರೆ ಹೋಗುವವರಿಗೆ ಓಡಾಟ ಇನ್ನಷ್ಟು ದುಬಾರಿಯಾಗುತ್ತದೆ. ಇದು ಅರ್ಥವ್ಯವಸ್ಥೆಯ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ~
-ರಾಮರಾಜ್, ವಿಜಯ ಬ್ಯಾಂಕ್‌ನ ನಿವೃತ್ತ ಉದ್ಯೋಗಿ

`ಬೆಲೆ ಏರಿಕೆ ನೀತಿ ವಿರುದ್ಧ ಹೋರಾಟ~
`ಪೆಟ್ರೋಲ್ ದರ ಹೆಚ್ಚಿಸಿದರೆ ಸಾರ್ವಜನಿಕರು ಸುಮ್ಮನಿ ರುತ್ತಾರೆ, ಆದರೆ ಡೀಸೆಲ್ ಬೆಲೆ ಹೆಚ್ಚಾದರೆ ಲಾರಿ ಮಾಲೀಕರು ಮುಷ್ಕರ ಮಾಡಿ ಎಚ್ಚರಿಕೆ ನೀಡುತ್ತಾರೆ. ಜನ ಸಾಮಾನ್ಯರು ಸುಮ್ಮನಿರುವುದರಿಂದ ಸರ್ಕಾರ ಬಾರಿ ಬಾರಿ ಬೆಲೆ ಹೆಚ್ಚಳ ಮಾಡುತ್ತಿದೆ. ಕೇಂದ್ರದ ಈ ನೀತಿ ವಿರುದ್ಧ ಸಾರ್ವ ಜನಿಕರು ಹೋರಾಟ ಮಾಡಬೇಕಾಗಿದೆ~
 -ಅನಿಲ್ ಮೂಬೈಲ್ ಅಂಗಡಿ ಮಾಲೀಕ

`ಬದುಕು ದುರ್ಬರ~
`ಪೆಟ್ರೊಲ್ ದರ ಹೆಚ್ಚಿಸಿರುವ ಕೇಂದ್ರದ ಕ್ರಮ ಸರಿಯ್ಲ್ಲಲ. ಈ ರೀತಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗುತ್ತ ಹೋದರೆ ಜನ ಬದುಕುವುದು ಕಷ್ಟವಾಗುತ್ತದೆ~
 -ರಂಗೇಗೌಡ, ಸಾರ್ವಜನಿಕ

`ಜೀವನ ಸಾಗಿಸುವುದು ಕಷ್ಟ~
`ದರ ಹೆಚ್ಚಸಿರುವುದರಿಂದ ನಾವು ಸಹ ಅನಿವಾರ್ಯವಾಗಿ ಆಟೋ ಬಾಡಿಗೆ ಹೆಚ್ಚಿಸಬೇಕಾಗುತ್ತದೆ. ಈಗಿರುವ ದರದಲ್ಲಿ ಆಟೋ ಓಡಿಸಿ ಜೀವನ ಸಾಗಿಸುವುದು ಕಷ್ಟ~
 -ಸ್ವಾಮೀಗೌಡ ಆಟೋಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.