ADVERTISEMENT

32.80 ಕೆ.ಜಿ ಮಿಲಿಯನ್ ಟನ್ ತಂಬಾಕು ಮಾರಾಟ: ಸುಬ್ಬರಾವ್

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 13:15 IST
Last Updated 2 ಡಿಸೆಂಬರ್ 2023, 13:15 IST
<div class="paragraphs"><p>ಸುಬ್ಬರಾವ್ </p></div>

ಸುಬ್ಬರಾವ್

   

ಕೊಣನೂರು: 2023-24 ನೇ ಸಾಲಿನಲ್ಲಿ ಇದುವರೆಗೆ 46 ದಿನಗಳು ತಂಬಾಕು ಹರಾಜು ನಡೆದಿದ್ದು, 32.80 ಕೆ.ಜಿ ಮಿಲಿಯನ್ ಟನ್ ತಂಬಾಕು ಮಾರಾಟವಾಗಿದೆ. ಪ್ರತಿ ಕೆ.ಜಿಗೆ ₹242.96 ಸರಾಸರಿ ಬೆಲೆ ದೊರೆತಿದೆ ಎಂದು ತಂಬಾಕು ಮಂಡಳಿಯ ಪ್ರಾದೇಶಕ ವ್ಯವಸ್ಥಾಪಕ ಸುಬ್ಬರಾವ್ ತಿಳಿಸಿದ್ದಾರೆ.

ಉತ್ತಮ ದರ್ಜೆಯ ತಂಬಾಕಿಗೆ ಪ್ರತಿ ಕೆ.ಜಿ.ಗೆ ಸರಾಸರಿ ಬೆಲೆ ₹250.81, ಮಧ್ಯಮ ದರ್ಜೆ ಪ್ರತಿ ಕೆ.ಜಿ.ಗೆ ₹246.50 ಮತ್ತು ಕಡಿಮೆ ದರ್ಜೆ ತಂಬಾಕಿನ ಸರಾಸರಿ ಬೆಲೆಯು ಕಳೆದ ವರ್ಷಕ್ಕೆ ಹೋಲಿಸಿದರೆ ₹14.27  ಹೆಚ್ಚಿದೆ. ರಾಜ್ಯದ ಎಲ್ಲಾ ತಂಬಾಕು ಮಾರುಕಟ್ಟೆಗಳಲ್ಲಿ ತಂಬಾಕು ಹುಡಿ ಕೊಳ್ಳುವಿಕೆಯನ್ನು ಪ್ರಾರಂಭಿಸಿದ್ದು, ಕಳೆದ 46 ದಿನಗಳಲ್ಲಿ ಪ್ರತಿ ಕೆ.ಜಿ ಹುಡಿಗೆ ₹134.60 ಸರಾಸರಿ ಬೆಲೆಯಂತೆ 1.10 ಮಿಲಿಯನ್ ಕೆ.ಜಿ ತಂಬಾಕು ಹುಡಿಯನ್ನು ಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

2024-25 ನೇ ಸಾಲಿಗೆ ರಸಗೊಬ್ಬರ ನೀಡಲು ತಂಬಾಕು ಬೆಳೆಗಾರರಿಂದ ರಾಜ್ಯ ಎಲ್ಲಾ ಮಾರುಕಟ್ಟೆಗಳಲ್ಲೂ ಇಂಡೆಂಟ್‌ ಸಂಗ್ರಹಿಸಲಾಗುತ್ತಿದ್ದು, ರಸಗೊಬ್ಬರ ಅಗತ್ಯವಿರುವ ಎಲ್ಲಾ ಬೆಳೆಗಾರರು ಡಿಸೆಂಬರ್‌ 15ರೊಳಗೆ ತಮ್ಮ ಬೇಡಿಕೆಯನ್ನು ಸಂಭಂದಿಸಿದ ಮಾರುಕಟ್ಟೆಗೆ ಸಲ್ಲಿಸಲು ತಿಳಿಸಲಾಗಿದೆ.

ತಂಬಾಕು ಮತ್ತು ಹುಡಿಯನ್ನು ಅಧಿಕೃತ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಬೇಕೆಂದು ಈಗಾಗಲೆ ಸಲಹೆ ನೀಡಲಾಗಿದ್ದು, ಇದಕ್ಕೆ ಹೊರತಾಗಿ ಅನಧಿಕೃತವಾಗಿ ಮಾರಾಟ ಮಾಡುವುದು ಕಂಡುಬಂದಲ್ಲಿ ಮಾರುಕಟ್ಟೆಯ ಕ್ಷೇತ್ರ ಸಿಬ್ಬಂದಿ ಅಥವ ಸಂಚಾರಿ ಜಾಗೃತ ದಳದ ಅಧಿಕಾರಿಗಳಿಗೆ ತಿಳಿಸಲು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.