ADVERTISEMENT

ತೋಟಗಾರಿಕೆ ಮಿಶ್ರ ಬೆಳೆ ಕೃಷಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 9:23 IST
Last Updated 6 ಜನವರಿ 2018, 9:23 IST

ಹಿರೀಸಾವೆ: ‘ತೆಂಗು ಕೃಷಿ ಜೊತೆಗೆ ತೋಟಗಾರಿಕೆ ಮಿಶ್ರಬೆಳೆ ಕೃಷಿಯಿಂದ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಜತೆಗೆ ತೆಂಗು ಇಳುವರಿಯೂ ಹೆಚ್ಚಲಿದೆ’ ಎಂದು ಕಂದಲಿ ಕೃಷಿ ವಿಜ್ಞಾನ ಕೆಂದ್ರದ ವಿಷಯ ತಜ್ಞ ಡಾ.ಟಿ.ಎಸ್.ಮಂಜುನಾಥ ಸ್ವಾಮಿ ಶುಕ್ರವಾರ ಹೇಳಿದರು.

ಹೋಬಳಿಯ ಮೇಟಿಕೆರೆ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಕೃಷಿ ಭಾಗ್ಯ ಯೇಜನೆಯಡಿ ಏರ್ಪಡಿಸಿದ್ದ ‘ತರಕಾರಿ ಬೀಜಗಳ ಕಿಟ್ ವಿತರಣೆ ಮತ್ತು ತೆಂಗಿನಲ್ಲಿ ಸಂಯೋಜಿತ ಬೇಸಾಯ’ ಯೋಜನೆಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತೆಂಗಿನ ತೋಟದ ಬದುಗಳ ಮೇಲೆ, ಕಡಿಮೆ ನೀರಿನಿಂದ ಬೆಳೆಯುವ ನಿಂಬೆ, ನುಗ್ಗೆ ಇನ್ನಿತರ ಬೆಳೆ ಸಾಧ್ಯವಿದೆ. ತೆಂಗಿಗೆ ಹನಿ ನೀರಾವರಿ ಪದ್ಧತಿ ಪಾಲಿಸಬೇಕು. ಮರದಿಂದ 6 ಅಡಿ ಅಂತರದಲ್ಲಿ ನೀರು ಹರಿಸಬೇಕು. ತೆಂಗಿನ ಗರಿ ಸೇರಿ ತ್ಯಾಜ್ಯಗಳ ಬಳಕೆಯಿಂದ ಎರೆಹುಳು ಗೊಬ್ಬರ ತಯಾರಿಕೆಗೆ ಒತ್ತು ನೀಡಬೇಕು ಎಂದು ಹೇಳಿದರು.

ADVERTISEMENT

ಕಾರೆಕೆರೆ ಕೃಷಿ ಮಹಾ ವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ.ಕೆ.ಎಂ.ಮುನಿಸ್ವಾಮಿ ಗೌಡ ಅವರು, ‘ತೆಂಗಿನ ಕಾಂಡಕ್ಕೆ ಪೆಟ್ಟು ಆಗದಂತೆ ನೋಡಿಕೊಳ್ಳಬೇಕು. ಅಂತರ ಬೇಸಾಯ ಪದ್ಧತಿಯಿಂದ ತೆಂಗಿಗೆ ರೋಗ ತಗುಲುವುದನ್ನು ತಡೆಯ ಬಹುದು. ಅಗತ್ಯಕ್ಕಿಂತ ನೀರಿನ ಅಂಶ ಇಳಿದರೆ ಗೆದ್ದಲು ರೋಗ ಬರ ಲಿದೆ. ಮರದ ಸುತ್ತ ತೇವಾಂಶ ಇರುವಂತೆ ರೈತರು ನೋಡಿಕೊಳ್ಳಬೇಕು’ ಎಂದರು.

ಶಾಸಕ ಸಿ.ಎನ್.ಬಾಲಕೃಷ್ಣ ಅವರು, ‘ಈ ಯೋಜನೆಯಲ್ಲಿ ಮೇಟಿಕೆರೆ, ಕಬ್ಬಿನಕೆರೆ, ಮಾಕನಹಳ್ಳಿ, ಯಾಳನಹಳ್ಳಿ ಗ್ರಾಮಗಳ 92 ರೈತರು ತೆಂಗು ಬೇಸಾಯ ಅಭಿವೃದ್ಧಿಗೆ ₹ 63 ಲಕ್ಷ ಅನುದಾನ ಬಿಡುಗಡೆಯಾಗಿದೆ, ₹ 30 ಲಕ್ಷ ಬಳಕೆ ಮಾಡಲಾಗಿದೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ದಿಡಗ ವಾಸು, ಅನಿತಾ ಕುಮಾರಸ್ವಾಮಿ, ರೇಣುಕಾ ರಂಗಸ್ವಾಮಿ, ಪ್ರಮೀಳಾ ಪ್ರಕಾಶ್, ಮಾಜಿ ಸದಸ್ಯ ರಾಮಕೃಷ್ಣ, ಜಿನ್ನೆನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಕುಮಾರಿ, ಸದಸ್ಯರಾದ ವೆಂಕಟೇಶ್, ಹರೀಶ್‌, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಉಪ ನಿರ್ದೇಶಕ ಸಂಜಯೈ, ಹಿರಿಯ ಸಹಾಯಕ ನಿರ್ದೇಶಕ ಸತೀಶ್, ಸಹಾಯಕ ತೋಟಗಾರಿಕೆ ಅಧಿಕಾರಿ ಭಾನುಪ್ರಕಾಶ್, ಗ್ರಾ.ಪಂ ಪಿಡಿಒ ಸುರೇಶ್‌, ಮಾಜಿ ಉಪಾಧ್ಯಕ್ಷ ಮೇಟಿ ಕೆರೆ ಚಂದ್ರು, ಶಿವಪ್ರಸಾದ್, ಯಾಳ ನಹಳ್ಳಿ ಚಂದ್ರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.