ADVERTISEMENT

ಆಕಸ್ಮಿಕ ಬೆಂಕಿ: ವಾಸದ ಮನೆ ಸಂಪೂರ್ಣ ಭಸ್ಮ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 2:41 IST
Last Updated 12 ಫೆಬ್ರುವರಿ 2021, 2:41 IST
ಅರಕಲಗೂಡು ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ಮನೆಗೆ ಬಿದ್ದ ಬೆಂಕಿಯನ್ನು ಆಗ್ನಿಶಾಮಕ ಸಿಬ್ಬಂದಿ ನಂದಿಸಿದರು
ಅರಕಲಗೂಡು ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ಮನೆಗೆ ಬಿದ್ದ ಬೆಂಕಿಯನ್ನು ಆಗ್ನಿಶಾಮಕ ಸಿಬ್ಬಂದಿ ನಂದಿಸಿದರು   

ಅರಕಲಗೂಡು: ಆಕಸ್ಮಿಕ ಬೆಂಕಿಗೆ ವಾಸದ ಮನೆ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿರುವ ಘಟನೆ ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

ಗ್ರಾಮದ ಪುಟ್ಟಮ್ಮ ಲೇಟ್ ಪುಟ್ಟೇಗೌಡರಿಗೆ ಸೇರಿದ ಮನೆ. ಮನೆಯಲ್ಲಿ ಐವರು ವಾಸವಿದ್ದು ಬೀಗ ಹಾಕಿ ಜಮೀನು ಬಳಿ ತೆರಳಿದ್ದ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಮನೆಯೊಳಗಿದ್ದ ದವಸ, ಧಾನ್ಯ ಎಲ್ಲ‌ ವಸ್ತುಗಳು ಸುಟ್ಟು ಹಾಳಾಗಿವೆ. ಸ್ಥಳೀಯರು ಮತ್ತು ಹೊಳೆನರಸೀಪುರ ಅಗ್ನಿಶಾಮಕ ಸಿಬ್ಬಂದಿ ಬೆಂಕಿ‌ ಆರಿಸಿದರು, ಅಷ್ಟರಲ್ಲೇ ಎಲ್ಲವೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬೂದಿಯಾಗಿದ್ದು ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿತ್ತು.

‘ಮನೆಯಲ್ಲಿ ಪುಟ್ಟಮ್ಮ ಮತ್ತವರ ಮಗ ರಾಜೇಗೌಡ, ಸೊಸೆ ಸುಂದ್ರಮ್ಮ, ಮೊಮ್ಮಕ್ಕಳಾದ ಶ್ರುತಿ, ಶಿವು ವಾಸವಿದ್ದರು. ಮನೆಯಲ್ಲಿದ್ದ‌ ಹಣ, ಒಡವೆ,‌ ಚವಸ ಧಾನ್ಯ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ’ ಎಂದು ಪುಟ್ಟಮ್ಮ ಕಣ್ಣೀರಿಟ್ಟರು.

ADVERTISEMENT

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಶೀಲ್ದಾರ್‌ ರೇಣುಕುಮಾರ್‌ ‘ಸಂತ್ರಸ್ತ ಕುಟುಂಬದವರಿಗೆ ಎಲ್ಲ ಇಲಾಖೆಗಳಿಂದ ಸಿಗುವ ಪರಿಹಾರ ದೊರಕಿಸಿಕೊಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.