ಅರಸೀಕೆರೆ: ‘ಪಕ್ಷಾತೀತವಾಗಿ ಎಲ್ಲರ ಸಹಕಾರ ಹಾಗೂ ಒಗ್ಗಟ್ಟಿನಿಂದ ಕೂಡಿ ಕರಿಯಮ್ಮ ದೇವಿಯ ನೂತನ ದೇವಸ್ಥಾನವನ್ನು ಕಟ್ಟೋಣ’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಗ್ರಾಮದೇವತೆ ಕರಿಯಮ್ಮ, ಮಲ್ಲಿಗೆಮ್ಮ ದೇವಿಯವರ ನೂತನ ವಾಹನಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ನೀಡಿ ಹಾಗೂ ಪೂಜಾ ಕಾರ್ಯ ನೆರವೇರಿಸಿ ಮಾತನಾಡಿದ ಅವರು, ‘ದೇವಾಲಯ ನಿರ್ಮಿಸಲು ವೈಯಕ್ತಿಕವಾಗಿ ₹ 50 ಲಕ್ಷ ಅನ್ನು ಪ್ರಥಮವಾಗಿ ನಾನೇ ನೀಡುವುದಲ್ಲದೆ ಸರ್ಕಾರದಿಂದಲೂ ಹೆಚ್ಚಿನ ನೆರವು ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.
‘ಬಹುದಿನಗಳ ಕನಸಾದ ದೇವಸ್ಥಾನ ನಿರ್ಮಿಸಲು ಇಂದು ಕಾಲ ನಿಗದಿಯಾಗಿದೆ. ದೇವಸ್ಥಾನವನ್ನು ಅಪಾರ ಭಕ್ತರು, ಗ್ರಾಮಸ್ಥರು ಹಾಗೂ ಕಮಿಟಿ ಸಹಕಾರದೊಂದಿಗೆ ನಿರ್ಮಿಸೋಣ. ಮಲ್ಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಹಾರ್ಚ್, ಇಂಟರ್‌ಲಾಕ್ ಹಾಗೂ ಕರಿಯಮ್ಮ ದೇವಾಲಯದ ಆವರಣಕ್ಕೆ ಇಂಟರ್‌ಲಾಕ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸೋಣ. ದೇವಿಯವರ ನೂತನ ವಾಹನ ನಿಲ್ಲಿಸಲು ಶೆಡ್‌ನ್ನು ಶೀಘ್ರವೇ ನಿರ್ಮಿಸಲಾಗುವುದು’ ಎಂದರು.
‘ದೇವಸ್ಥಾನದ ಅಧ್ಯಕ್ಷ ಯೋಗೀಶ್, ಕರವೇ ಅಧ್ಯಕ್ಷ ನಾರಾಯಣಗೌಡರ ನೇತೃತ್ವ ಹಾಗೂ ಭಕ್ತ ಸಮೂಹ ಒಂದಾಗಿ ಸಾಮರಸ್ಯದಿಂದ ದೇವಸ್ಥಾನ ಕಟ್ಟೋಣ’ ಎಂದು ಹೇಳಿದರು.
ಮಲ್ಲಿಗೆಮ್ಮ ದೇವಸ್ಥಾನದಿಂದ ಮೂಲಸ್ಥಾನ ಕರಿಯಮ್ಮ ದೇವಸ್ಥಾನದವರೆಗೆ ಶ್ರೀ ಕರಿಯಮ್ಮ ,ಮಲ್ಲಿಗೆಮ್ಮ ದೇವಿ , ಚೆಲುವರಾಯ ಸ್ವಾಮಿ, ಧೂತರಾಯ ಸ್ವಾಮಿ ಹಾಗೂ ಕೆಂಚರಾಯ ಸ್ವಾಮಿಯವರ ಉತ್ಸವ ಮಂಗಳವಾದ್ಯದೊಂದಿಗೆ ನಡೆಯಿತು.
ಕಾರ್ಯದರ್ಶಿ ಎ.ಜಿ.ಕಿರಣ್‌ಕುಮಾರ್, ಸಹಕಾರ್ಯದರ್ಶಿ ದರ್ಶನ್, ಖಜಾಂಚಿ ರಮೇಶ್, ಸದಸ್ಯರಾದ ನಾಗಭೂಷಣ್, ದಿವಾಕರ್, ಪ್ರಸನ್ನಕುಮಾರ್, ಗುರುಮೂರ್ತಿ, ರವಿಕಿರಣ್, ಎ.ಎಂ.ದಿಲೀಪ್‌ಕುಮಾರ್, ಆಟೊ ನಾಗರಾಜ್, ನಿರಂಜನಕುಮಾರ್, ದೀಪು, ವಿ.ರಾಜಣ್ಣ, ಯಶವಂತ, ರಮೇಶ್, ಮಧು, ದರ್ಶನ್, ನವೀನ್, ಮಂಜುನಾಥ್, ಲೋಕೇಶ್, ಸುರೇಶ್, ನಗರಸಭೆ ಉಪಾಧ್ಯಕ್ಷ ಮನೋಹರ್, ಸದಸ್ಯ ದರ್ಶನ್, ಮನೋಜ್‌ಕುಮಾರ್, ಮಾರುತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.