ಅರಸೀಕೆರೆ: ತರಳಬಾಳು ಶಾಖಾಮಠ ಸಾಣೇಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಗ್ರಾಮಗಳ ಸುಧಾರಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಜ. 27ರಿಂದ 30ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸಲು ನಿರಂಜನ ಪೀಠದಿಂದ ಭಕ್ತರ ಜೊತೆ ತೆರಳುತ್ತೇನೆ ಎಂದು ರುದ್ರಮುನಿ ಸ್ವಾಮೀಜಿ ಶನಿವಾರ ತಿಳಿಸಿದರು.
‘ನಮ್ಮ ನಡೆ ಸರ್ವೋದಯದ ಶಾಲೆಯ ಕಡೆ’ ಕಾರ್ಯಕ್ರಮದಡಿ ಶ್ರೀಗಳು ಇತ್ತೀಚಿನ ದಿನಗಳಲ್ಲಿ ಕಲುಷಿತಗೊಂಡಿರುವ ಕೃಷಿ, ಪರಿಸರ, ಶಿಕ್ಷಣ, ರಾಜ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಜನರಲ್ಲಿ ಸುಧಾರಣೆ ತರುವ ಉದ್ದೇಶದಿಂದ ಪಾದಯಾತ್ರೆಯ ಮೂಲಕ ಜಾಗೃತಿ ಮೂಡಿಸುವ ಚಿಂತನೆಯನ್ನು ಹೊಂದಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಅರಸೀಕೆರೆ ತಾಲ್ಲೂಕಿನಿಂದ ಈ ಪಾದಯಾತ್ರೆಯಲ್ಲಿ ಬರುವ ಭಕ್ತರು ಜ. 27ರಂದು ಬೆಳಿಗ್ಗೆ 6ಕ್ಕೆ ನಿರಂಜನ ಪೀಠದಿಂದ ಹೊರಡಲಿದ್ದು, ಕಣಕಟ್ಟೆ ಮಾರ್ಗವಾಗಿ ಶ್ಯಾನೆಗೆರೆ, ಸಿಂಗಟಗೆರೆ, ಒಂಬತ್ತನೇ ಮೈಲಿಕಲ್ಲು ಮಾರ್ಗವಾಗಿ ತೆರಳಲಾಗುವುದು’ ಎಂದರು.
ಮರುಳಸಿದ್ದ ಸ್ವಾಮಿ, ನಾಗಸಮುದ್ರ ಸ್ವಾಮಿ, ಮಾಡಾಳು ಶಿವಲಿಂಗಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.