ADVERTISEMENT

ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಉಚ್ಚಂಗಿ ಗ್ರಾ.ಪಂ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 4:46 IST
Last Updated 18 ನವೆಂಬರ್ 2025, 4:46 IST
ಯಸಳೂರು ಹೋಬಳಿಯ ಉಚ್ಚಂಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾರಾ, ಉಪಾಧ್ಯಕ್ಷ ವಿನಯ್ ಅವರನ್ನು ಚುನಾವಣಾಧಿಕಾರಿ ಅಭಿನಂದಿಸಿದರು.
ಯಸಳೂರು ಹೋಬಳಿಯ ಉಚ್ಚಂಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾರಾ, ಉಪಾಧ್ಯಕ್ಷ ವಿನಯ್ ಅವರನ್ನು ಚುನಾವಣಾಧಿಕಾರಿ ಅಭಿನಂದಿಸಿದರು.   

ಹೆತ್ತೂರು: ಉಚ್ಚಂಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನ ಪಡೆಯುವಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಡ ಯಶಸ್ವಿಯಾಗಿದೆ.
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಡೆದಿದ್ದಾರೆ.

ಎರಡನೇ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಹಿಂದುಳಿದ ವರ್ಗ (ಎ) ಕ್ಕೆ ಮೀಸಲಾಗಿದ್ದರು. ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಉಚ್ಚಂಗಿ ಕ್ಷೇತ್ರದ ಜೆಡಿಎಸ್ ಬೆಂಬಲಿತ ಸದಸ್ಯೆ ತಾರಾ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ದೊಡ್ಡ ಕುಂದೂರು ಕ್ಷೇತ್ರದ ಸದಸ್ಯ ಡಿ.ಡಿ. ವಿನಯ್ ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಆದಿತ್ಯ ಎಚ್.ಎ. ಘೋಷಿಸಿದರು. ಮೀಸಲಾತಿ ನಿಗದಿ ಕುರಿತು ಉಚ್ಚಂಗಿ ಹಾಗೂ ವನಗೂರು ಪಂಚಾಯಿತಿಯ ಕೆಲವರು ನ್ಯಾಯಾಲಯದ ಮೆಟ್ಟಲೇರಿದ್ದರಿಂದ, ಈ ಎರಡು ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ತಡವಾಗಿ ನಡೆಯುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.