ADVERTISEMENT

ಚಿತ್ರದುರ್ಗ ಬಸ್ ದುರಂತ: ಸಾವಿನಲ್ಲೂ ಒಂದಾದ ಹಾಸನದ ಗೆಳತಿಯರು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 5:45 IST
Last Updated 27 ಡಿಸೆಂಬರ್ 2025, 5:45 IST
<div class="paragraphs"><p>ನವ್ಯಾ ಹಾಗೂ ಮಾನಸ</p></div>

ನವ್ಯಾ ಹಾಗೂ ಮಾನಸ

   

ಹಾಸನ: 'ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಮದುವೆ ಮಾತುಕತೆ ನಡೆದು ಕೆಲ ದಿನದಲ್ಲಿಯೇ ಯುವತಿ ಮಾನಸಾ ಹಸೆಮಣೆ ಏರಬೇಕಿತ್ತು. ಇದೇ ಮದುವೆಯಲ್ಲಿ ನವವಧು ಗೆಳತಿಯೊಂದಿಗೆ ನವ್ಯಾ ಸಂಭ್ರಮ ಆಚರಿಸಬೇಕಾಗಿತ್ತು’

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಸಂಭವಿಸಿದ ಬಸ್ ದುರಂತದಲ್ಲಿ ಮೃತಪಟ್ಟ ಗೆಳತಿಯರಾದ ಮಾನಸ ಹಾಗೂ ನವ್ಯಾ ಅವರ ಕುಟುಂಬಗಳು ಹೀಗೆ ತೀವ್ರ ಶೋಕದಲ್ಲಿ ಮುಳುಗಿವೆ.

ADVERTISEMENT

‘ಇಬ್ಬರು ಬಾಲ್ಯದಿಂದಲೂ ಜೊತೆಗೆ ಆಡಿ, ಬೆಳೆದು ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದರು.‌ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳಿಂದ ಇಬ್ಬರೂ ಒಂದೇ ರೂಮಿನಲ್ಲಿ ವಾಸವಾಗಿದ್ದರು. ಒಟ್ಟೊಟ್ಟಿಗೇ ಜೀವ ಬಿಟ್ಟರು’ ಎಂಬುದು ಕುಟುಂಬಗಳ ಸಂಕಟ.

ತಂದೆಯ ಕಣ್ಣೀರು:

ಹಾಸನದ ನಿವಾಸಿ ಮಾನಸ ಅವರ ತಂದೆ ಚಂದ್ರೇಗೌಡ, ‘ಮಗಳ ಮದುವೆ ಕುರಿತು ಭಾನುವಾರ ಮಾತುಕತೆ ನಡೆಸಲು ನಿರ್ಧರಿಸಿದ್ದಾಗಲೇ ದುರ್ಘಟನೆ ಸಂಭವಿಸಿರುವುದು ಕುಟುಂಬಕ್ಕೆ ಅಪಾರ ಆಘಾತ ತಂದಿದೆ’ ಎಂದು ಕಣ್ಣೀರಿಟ್ಟರು.

ಎರಡು ದಿನಗಳ ಹಿಂದೆ ಮಗಳೊಂದಿಗೆ ಮಾತನಾಡಿದ್ದನ್ನು ಸ್ಮರಿಸಿದ ಅವರು, ‘ಮೃತದೇಹ ಶೀಘ್ರ ಪತ್ತೆಯಾಗುವ ಸಾಧ್ಯತೆ ಇದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ’ ಎಂದರು.

ಶತ್ರುಗಳಿಗೂ ಬಾರದಿರಲಿ:

‘ಇಂತಹ ಕಷ್ಟ ಯಾವ ಶತ್ರುವಿಗೂ ಬಾರದಿರಲಿ’ ಎಂದು ನವ್ಯಾ ಅವರ ತಂದೆ ಮಂಜಪ್ಪ ಕಣ್ಣೀರಿಟ್ಟರು.

‘ನವ್ಯಾ ಅವರ ಮೃತದೇಹ ಪತ್ತೆಗೆ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದ್ದು, ಸೋಮವಾರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.